ಕೋವಿಡ್-19: ಭಾರತದ ವಿಕಲಚೇತನರಿಗೆ ಇಂಡೋ-ಅಮೆರಿಕನ್ ಎನ್ ಜಿಒ ದಿಂದ 1 ಲಕ್ಷ ಡಾಲರ್ ನಿಧಿ ಸಂಗ್ರಹ
ಕೋವಿಡ್-19 ಸಾಂಕ್ರಾಮಿಕದಲ್ಲಿ ಭಾರತದ ವಿಕಲಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಇಂಡೋ-ಅಮೆರಿಕನ್ ಎನ್ ಜಿಒವೊಂದು ಬರೊಬ್ಬರಿ 1 ಲಕ್ಷ ಡಾಲರ್ ನಿಧಿ ಸಂಗ್ರಹಿಸಿದೆ.

ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕದಲ್ಲಿ ಭಾರತದ ವಿಕಲಚೇತನರಿಗೆ ನೆರವಾಗುವ ನಿಟ್ಟಿನಲ್ಲಿ ಇಂಡೋ-ಅಮೆರಿಕನ್ ಎನ್ ಜಿಒವೊಂದು ಬರೊಬ್ಬರಿ 1 ಲಕ್ಷ ಡಾಲರ್ ನಿಧಿ ಸಂಗ್ರಹಿಸಿದೆ.
ಲಾಸ್ ಏಂಜಲೀಸ್ ಮೂಲದ ಭಾರತ-ಅಮೆರಿಕ ಎನ್ ಜಿಒ ‘ವಾಯ್ಸ್ ಆಫ್ ಸ್ಪೆಷಲಿ ಏಬಲ್ಡ್ ಪೀಪಲ್’(ವಿಒಎಸ್‌ಎಪಿ) ಸ್ವಯಂ ಸೇವಾ ಸಂಘಟನೆಯು ಕೋವಿಡ್ ಸಾಂಕ್ರಾಮಿಕದಿಂದ ಸಂಕಷ್ಟಕ್ಕೊಳಗಾಗಿರುವ ಅಂಗವಿಕಲರಿಗೆ ನೆರವಾಗಲು ಸುಮಾರು 72.54 ಲಕ್ಷ (1 ಲಕ್ಷ ಡಾಲರ್) ಸಂಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯು, 'ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅಂಗವಿಕಲರಿಗೆ ದಿನಸಿ, ಪಿಪಿಇ ಕಿಟ್ ಸೇರಿದಂತೆ ಇತರೆ ವಸ್ತುಗಳನ್ನು ಒದಗಿಸಲು 1 ಲಕ್ಷ ಡಾಲರ್ ಸಂಗ್ರಹಿಸಲಾಗಿದೆ. ಕೋವಿಡ್‌ನಿಂದಾಗಿ ಹಿರಿಯ ನಾಗರಿಕರು, ಅಂಗವಿಕಲರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ತಮ್ಮ ಸಂಘಟನೆಯು 1 ಲಕ್ಷ ಡಾಲರ್ ಸಂಗ್ರಹಿಸಲಾಗಿದ್ದು, ಭಾರತದಲ್ಲಿ ಈವರೆಗೆ 4,500ಕ್ಕೂ ಹೆಚ್ಚು ದಿನಸಿ ಮತ್ತು ಪಿಪಿಇ ಕಿಟ್‌ಗಳನ್ನು ವಿತರಿಸಲಾಗಿದ್ದು, 10,000 ಅಂಗವಿಕಲರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದೆ.
ಭಾರತದ ಕಾರ್ಯನಿರ್ವಾಹಕ ಪಾಲುದಾರರ ಬಿಪಿಎ ನೆರವಿನೊಂದಿಗೆ ಕರ್ನಾಟಕದ ಬೆಳಗಾವಿ, ಮಧ್ಯಪ್ರದೇಶದ ನಾಗ್ಡಾ ಮತ್ತು ಗುಜರಾತ್‌ನ ಹಲವು ಜಿಲ್ಲೆಗಳಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ. ಹೈದರಾಬಾದ್ ಮತ್ತು ಪುಣೆಗೂ ಇದನ್ನು ವಿಸ್ತರಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಘಟನೆಯ ಸದಸ್ಯರಾದ ಪ್ರಣವ್ ದೇಸಾಯಿ ಅವರು, VOSAP ಯುನೈಟೆಡ್ ನೇಷನ್ಸ್ ಎಕನಾಮಿಕ್ ಅಂಡ್ ಸೋಶಿಯಲ್ ಕೌನ್ಸಿ (ECOSOC) ನೊಂದಿಗೆ ವಿಶೇಷ ಸಮಾಲೋಚನೆ ನಡೆಸಿದ್ದು, ತಮ್ಮ ಸಂಘಟನೆಯ ಬಹುತೇಕ ಸದಸ್ಯರು ಮತ್ತು ದಾನಿಗಳು ಭಾರತೀಯರಾಗಿದ್ದು, ಎಲ್ಲರೂ ಆಯಾ ನಗರಗಳು ಮತ್ತು ಸಮುದಾಯಗಳಲ್ಲಿನ ದಿವ್ಯಾಂಗರಿಗೆ ನೆರವು ನೀಡುತ್ತಿದ್ದಾರೆ. ಹೀಗೆ ಪಡೆದ ದೇಣಿಗೆಯ ಆಮ್ಲಜನಕ ಸಾಂದ್ರತೆಗಳು ಮತ್ತು ಹಣದಲ್ಲಿ ಶೇ.10 ಪ್ರತಿಶತದಷ್ಟನ್ನು ವಿಕಲ ಚೇತನರಿಗೆ ಸಹಾಯ ಮಾಡಲು ಹಂಚಿಕೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


