ಚೀನಾದಲ್ಲಿ ಡೆಲ್ಟಾ ರೂಪಾಂತರ ಹರಡುವಿಕೆ ಮುಂದುವರೆಯುವ ಸಾಧ್ಯತೆ: ಅಧಿಕಾರಿಗಳ ಎಚ್ಚರಿಕೆ
ಡೆಲ್ಟಾ ರೂಪಾಂತರದ ಹೊಸ ಅಲೆ ಪೂರ್ವ ಚೀನಾದ ನಾಂಜಿಂಗ್ ನಗರದಲ್ಲಿ ಕಂಡುಬಂದಿದ್ದು, ಇದು ಕಿರು ಅವಧಿಯಲ್ಲಿ ಹೆಚ್ಚಿನ ವಲಯಗಳಿಗೆ ಹರಡುವ ಸಾಧ್ಯತಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೀಜಿಂಗ್: ಡೆಲ್ಟಾ ರೂಪಾಂತರದ ಹೊಸ ಅಲೆ ಪೂರ್ವ ಚೀನಾದ ನಾಂಜಿಂಗ್ ನಗರದಲ್ಲಿ ಕಂಡುಬಂದಿದ್ದು, ಇದು ಕಿರು ಅವಧಿಯಲ್ಲಿ ಹೆಚ್ಚಿನ ವಲಯಗಳಿಗೆ ಹರಡುವ ಸಾಧ್ಯತಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇತ್ತೀಚಿನ ಏಕಾಏಕಿ ಕಾಣಿಸಿಕೊಂಡಿರುವ ಡೆಲ್ಟಾ ರೂಪಾಂತರ ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ವೇಗವಾಗಿ ಹರಡುತ್ತದೆ ಎಂದು ಸರ್ಕಾರದಿಂದ ನಡೆಸಲ್ಪಡುತ್ತಿರುವ ಗ್ಲೋಬಲ್ ಟೈಮ್ಸ್ ಹೇಳಿದೆ. ನಾಜಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇಸಿಗೆಯಲ್ಲಿ ಪ್ರವಾಸಿಗರು ಸೇರಿದ್ದಾಗ ರಷ್ಯಾದಿಂದ ಬಂದ ವಿಮಾನವೊಂದನ್ನು ನಿರ್ವಹಿಸುತ್ತಿದ್ದ ಕ್ಲೀನರ್ ಗಳಿಂದ ಈ ಸೋಂಕು ಹರಡದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಜಿಂಗ್ ವಿಮಾನ ನಿಲ್ದಾಣದಿಂದ ಇತರ ವಲಯಗಳಿಗೆ ಸೋಂಕು ಹರಡಿದೆ. ಇನ್ನೂ ಹೆಚ್ಚಿನ ವಲಯಗಳಿಗೆ ಸೋಂಕು ಹರಡುವಿಕೆ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ 175 ದಿನಗಳ ನಂತರ ಬೀಜಿಂಗ್ ನಲ್ಲಿ ಕೋವಿಡ್-19 ಕೇಸ್ ಗಳು ವರದಿಯಾಗಿವೆ.
ನಗರದ ಲಕ್ಸುರಿ ಹೋಟೆಲ್ ವೊಂದರಲ್ಲಿ ಸೋಂಕು ಕಾಣಿಸಿಕೊಂಡ ನಂತರ ಅಲ್ಲಿನ ಗೆಸ್ಟ್ ಗಳಿಗೆ 21 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ವರದಿಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


