ಪ್ರಮುಖ ಹುದ್ದೆಗಳಿಗೆ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕದ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷ ಜೋ ಬೈಡನ್ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಕ ಮಾಡಿದ್ದಾರೆ.

ವಾಷಿಂಗ್ ಟನ್: ಅಮೆರಿಕದ ಪ್ರಮುಖ ಹುದ್ದೆಗಳಿಗೆ ಅಧ್ಯಕ್ಷ ಜೋ ಬೈಡನ್ ಭಾರತೀಯ-ಅಮೆರಿಕನ್ ವೈದ್ಯರನ್ನು ನೇಮಕ ಮಾಡಿದ್ದಾರೆ. ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿದ್ದ ಡಾ. ರಾಹುಲ್ ಗುಪ್ತಾ ಅವರನ್ನು ಜೋ ಬೈಡನ್ ಅಮೆರಿಕದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ.
ಶಸ್ತ್ರಚಿಕಿತ್ಸಕರಾಗಿರುವ ಡಾ. ಅತುಲ್ ಗವಾಂಡೆ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕಾದ ಏಜೆನ್ಸಿಯ ಜಾಗತಿಕ ಆರೋಗ್ಯ ವಿಭಾಗದ ಸಹಾಯಕ ಆಡಳಿತಗಾರರನ್ನಾಗಿ ನೇಮಕ ಮಾಡಲಾಗಿದೆ.
25 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಗುಪ್ತಾ ಅವರಿಗೆ ಇಬ್ಬರು ಗೌರ್ನರ್ ಗಳ ಅವಧಿಯಲ್ಲಿ ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ.
ರಾಜ್ಯದ ಮುಖ್ಯ ಆರೋಗ್ಯ ಅಧಿಕಾರಿಯಾಗಿ ಡಾ.ಗುಪ್ತಾ ಅವರು ಹಲವಾರು ಒಪಿಯಾಡ್ ಬಿಕ್ಕಟ್ಟು ಸ್ಪಂದನೆ ಪ್ರಯತ್ನಗಳ ನೇತೃತ್ವವವನ್ನು ವಹಿಸಿದ್ದು, ನಜಾತ ಶಿಶುಗಳಲ್ಲಿ ಕಂಡುಬರುವ ನಿಯೋನೇಟಲ್ ಆಬ್ಸ್ಟಿನೆನ್ಸ್ ಸಿಂಡ್ರೋಮ್ ಗೆ ತುತ್ತಾಗಲು ಅತಿ ಹೆಚ್ಚು ಅಪಾಯ ಹೊಂದಿರುವ ಮಕ್ಕಳನ್ನು ಗುರುತಿಸಲು ಬರ್ತ್ಕ್ಸೋರ್ ಯೋಜನೆಯನ್ನು ರೂಪಿಸುವುದು ಸೇರಿದಂತೆ ಹಲವು ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಪ್ರವರ್ತಕರೆಂದೇ ಖ್ಯಾತಿ ಪಡೆದಿದ್ದಾರೆ.
ಎಬೋಲಾ ವೈರಾಣು ಭೀತಿಯ ಸಂದರ್ಭದಲ್ಲಿ ರಾಜ್ಯದ ಝಿಕಾ ಕ್ರಿಯಾ ಯೋಜನೆಯ ಅಭಿವೃದ್ಧಿಯ ನೇತೃತ್ವವನ್ನೂ ಗುಪ್ತಾ ಅವರು ವಹಿಸಿಕೊಂಡಿದ್ದು ಗಮನಾರ್ಹವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಗುಪ್ತಾ ಅವರು ಹಲವು ಸಂಘಟನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ಭಾರತದ ರಾಯಭಾರಿಯ ಪುತ್ರರಾಗಿರುವ ರಾಹುಲ್ ಜನಿಸಿದ್ದು ಭಾರತದಲ್ಲಿ. ವಾಷಿಂಗ್ ಟನ್ ಡಿಸಿಯ ಉಪನಗರಗಳಲ್ಲಿ ಬೆಳೆದ ಇವರು, 21 ನೇ ವಯಸ್ಸಿನಲ್ಲಿ ದೆಹಲಿಯ ವಿಶ್ವವಿದ್ಯಾನಿಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದರು.
ಅಲಬಾಮಾ-ಬರ್ಮಿಂಗ್ಹ್ಯಾಮ್ ನ ವಿವಿಯಿಂದ ಸಾರ್ವಜನಿಕ ಆರೋಗ್ಯದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾಹುಲ್, ಲಂಡನ್ ಸ್ಕೂಲ್ ಅಫ್ ಬ್ಯುಸಿನೆಸ್& ಫೈನಾನ್ಸ್ ನ ವಿಭಾಗದಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


