ಟ್ರಂಪ್ ಪಕ್ಷದಿಂದ ‘ಸೇವ್ ಅಮೆರಿಕಾ' ಬೃಹತ್ ಸಾರ್ವಜನಿಕ ಅಭಿಯಾನ
ಎಲ್ಲಾ ವಿಚಾರದಲ್ಲೂ ಅಮೆರಿಕಾ ಮೊದಲು, ಅಮೆರಿಕ ಜನರಿಗೆ ಮೊದಲ ಉದ್ಯೋಗ ಸಿಗಬೇಕು ಎಂದು ಪ್ರತಿಪಾದನೆ ಮಾಡಿಕೊಂಡು ಬಂದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪಕ್ಷ ಈಗ ಅಮೆರಿಕ ಉಳಿಸಿ ಎಂಬ ಹೊಸ ಅಭಿಯಾನ ಆರಂಭ ಮಾಡಿದೆ.

ವಾಷಿಂಗ್ಟನ್: ಎಲ್ಲಾ ವಿಚಾರದಲ್ಲೂ ಅಮೆರಿಕಾ ಮೊದಲು, ಅಮೆರಿಕ ಜನರಿಗೆ ಮೊದಲ ಉದ್ಯೋಗ ಸಿಗಬೇಕು ಎಂದು ಪ್ರತಿಪಾದನೆ ಮಾಡಿಕೊಂಡು ಬಂದಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪಕ್ಷ ಈಗ ಅಮೆರಿಕ ಉಳಿಸಿ ಎಂಬ ಹೊಸ ಅಭಿಯಾನ ಆರಂಭ ಮಾಡಿದೆ.
ಇದೇ ವೇಳೆ ಹೊಸ ಆಡಳಿತದ ಬಗ್ಗೆ ಸಭೆಯಲ್ಲಿ ಬಹಳ ಅಸಮಾಧಾನ ಜನಾಕ್ರೋಶ ವ್ಯಕ್ತವಾಗಿದೆ. ಗಂಭೀರ ಆರೋಪಗಳು ಸುರಿಮಳೆಯನ್ನೇ ಮಾಡಲಾಗಿದೆ.ಹೊಸದಾಗಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಜೋ ಬೈಡನ್ ಆಡಳಿತ ಅಮೆರಿಕ ಜನರ ನಂಬಿಕೆಯನ್ನು ಹುಸಿಗೊಳಿಸಿದೆ, ಆಡಳಿತ ಯಂತ್ರ ಹಳಿತಪ್ಪಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅಮೆರಿಕ ಹಲವು ನಗರಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದೆ ಗುಂಡಿನ ಚಕಮಕಿಯ ಘಟನೆಗಳು ನಿರಾತಂಕವಾಗಿ ಸಾಗಿದೆ ಎಂದು ದೂರಲಾಗಿದೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ "ಸೇವ್ ಅಮೇರಿಕಾ" ಪ್ರಚಾರ ಶೈಲಿಯ ಸಭೆಯನ್ನು ಫ್ಲೋರಿಡಾದ ಸರಸೋಟದಲ್ಲಿ ನಡೆಸಿ, ಹೊಸ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


