ವಿದೇಶ

ಫಿಲಿಪ್ಪೈನ್ಸ್ ನಲ್ಲಿ ಮಿಲಿಟರಿ ವಿಮಾನ ಪತನ: 85 ಜನರ ಪೈಕಿ ಕನಿಷ್ಠ 17 ಸಾವು, 40 ಮಂದಿಯ ರಕ್ಷಣೆ

ಸುಮಾರು 85 ಮಂದಿಯನ್ನು ಹೊತ್ತು ಸಾಗುತ್ತಿದ್ದ ಮಿಲಿಟರಿ ವಿಮಾನ ಫಿಲಿಪ್ಪೈನ್ಸ್ ನಲ್ಲಿ ಪತನವಾಗಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿ ಸುಮಾರು 40 ಮಂದಿಯ ರಕ್ಷಣೆ ಮಾಡಲಾಗಿದೆ.

ಫಿಲಿಪ್ಪೈನ್ಸ್ ನಲ್ಲಿ ಮಿಲಿಟರಿ ವಿಮಾನ ಪತನ: 85 ಜನರ ಪೈಕಿ ಕನಿಷ್ಠ 17 ಸಾವು, 40 ಮಂದಿಯ ರಕ್ಷಣೆ
ಫಿಲಿಪ್ಪೈನ್ಸ್ ನಲ್ಲಿ ಮಿಲಿಟರಿ ವಿಮಾನ ಪತನ
Published On :

ಮನಿಲಾ: ಸುಮಾರು 85 ಮಂದಿಯನ್ನು ಹೊತ್ತು ಸಾಗುತ್ತಿದ್ದ ಮಿಲಿಟರಿ ವಿಮಾನ ಫಿಲಿಪ್ಪೈನ್ಸ್ ನಲ್ಲಿ ಪತನವಾಗಿದ್ದು, ಕನಿಷ್ಠ 17 ಮಂದಿ ಸಾವನ್ನಪ್ಪಿ ಸುಮಾರು 40 ಮಂದಿಯ ರಕ್ಷಣೆ ಮಾಡಲಾಗಿದೆ.

ಫಿಲಿಪ್ಪೈನ್ಸ್ ನ ಸುಲು ಪ್ರಾಂತ್ಯದ ಜೊಲೋ ದ್ವೀಪದಲ್ಲಿ ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮೂಲಗಳ ಪ್ರಕಾರ ವಿಮಾನದಲ್ಲಿ ಕನಿಷ್ಠ 85 ಜನರು ಇದ್ದರು ಎನ್ನಲಾಗಿದೆ. 

ಈ ಬಗ್ಗೆ ಫಿಲಿಪ್ಪೈನ್ಸ್ ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಸಿರಿಲಿಟೊ ಸೊಬೆಜಾನಾ ಮಾಹಿತಿ ನೀಡಿದ್ದು, 'ಫಿಲಿಪೈನ್ಸ್ ನ ವಾಯುಪಡೆಯ (ಪಿಎಎಫ್) ಸಿ-130 ವಿಮಾನದ ಭಗ್ನಾವಶೇಷದಿಂದ ಇಲ್ಲಿಯವರೆಗೆ 40 ಜನರನ್ನು ರಕ್ಷಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಇತ್ತೀಚೆಗೆ ಮೂಲಭೂತ ಮಿಲಿಟರಿ ತರಬೇತಿಯಿಂದ  ಪದವಿ ಪಡೆದಿದ್ದರು. ಭಯೋತ್ಪಾದನೆ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ದ್ವೀಪವೊಂದಕ್ಕೆ ನಿಯೋಜಿಸಲಾಗಿತ್ತು. ಸುಲು ಪ್ರಾಂತ್ಯದ ಜೊಲೋ ದ್ವೀಪಕ್ಕೆ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಿಮಾನವು ರನ್ ವೇ ಮೇಲೆ ಇಳಿಯುವಲ್ಲಿ ವಿಫಲವಾಗಿ ಪಕ್ಕಕ್ಕೆ ಹೋಗಿ ಅಪಘಾತಕ್ಕೀಡಾಗಿದೆ ಎಂದು  ಹೇಳಿದ್ದಾರೆ.

ದಕ್ಷಿಣ ಫಿಲಿಪೈನ್ಸ್‌ನಲ್ಲಿ ಹಲವಾರು ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಇಲ್ಲಿ ಭಾರೀ ಸಂಖ್ಯೆಯಲ್ಲಿ ಮಿಲಿಟರಿಯನ್ನು ನಿಯೋಜಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.