ಸೇನೆಗೆ ಮಕ್ಕಳ ಸೇರ್ಪಡೆ: ಅಮೆರಿಕಾದ ವಾದವನ್ನು ತಿರಸ್ಕರಿಸಿದ ಪಾಕಿಸ್ತಾನ
ಅಮೆರಿಕದ ಚೈಲ್ಡ್ ಸೋಲ್ಜರ್ಸ್ ಪ್ರಿವೆನ್ಷನ್ ಆಕ್ಟ್ (ಸಿಎಸ್‌ಪಿಎ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದಕ್ಕೆ ಪಾಕಿಸ್ತಾನ ತನ್ನ ಅಸಮ್ಮತಿ ಸೂಚಿಸಿದೆ.

ಇಸ್ಲಾಮಾಬಾದ್: ಅಮೆರಿಕದ ಚೈಲ್ಡ್ ಸೋಲ್ಜರ್ಸ್ ಪ್ರಿವೆನ್ಷನ್ ಆಕ್ಟ್ (ಸಿಎಸ್‌ಪಿಎ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದಕ್ಕೆ ಪಾಕಿಸ್ತಾನ ತನ್ನ ಅಸಮ್ಮತಿ ಸೂಚಿಸಿದೆ. ಈ ಕ್ರಮವು "ವಾಸ್ತವಿಕವಾದ ದೀಷ ಹಾಗೂ ತಿಳುವಳಿಕೆ ಕೊರತೆ"ಯಿಂದ ಕೂಡಿದೆ. ಅಲ್ಲದೆ ಪಾಕಿಸ್ತಾನದ ವಿರುದ್ಧದ "ಆಧಾರರಹಿತ ಸಮರ್ಥನೆಗಳನ್ನು" ಹೊಂದಿದ್ದು ಅದನ್ನು ಪರಿಶೀಲಿಸಬೇಕು ಎಂದು ಅಮೆರಿಕಾಗೆ ಒತ್ತಾಯಿಸಿದೆ.
2020 ರಲ್ಲಿ ಸೈನ್ಯದಲ್ಲಿ ಮಕ್ಕಳನ್ನು ನೇಮಕ ಮಾಡಿದ್ದಅಥವಾ ಬಳಸಿದ ದೇಶಗಳ ಪಟ್ಟಿಗೆ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನವನ್ನು ಸೇರಿಸಿದೆ. ಈ ಪಟ್ಟಿಯಲ್ಲಿರುವ ದೇಶಗಳಿಗೆ ಮಿಲಿಟರಿ ನೆರವಿನ ಮೇಲೆ ನಿರ್ಬಂಧ ಹೇರಲು ಅವಕಾಶವಾಗಲಿದೆ.
ಅಮೆರಿಕಾದ ಈ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿ ಶನಿವಾರ ಹೇಳಿಕೆ ನೀಡಿ ವರದಿಯನ್ನು ಪ್ರಕಟಿಸುವ ಮೊದಲು ಯಾವುದೇ ಆಡಳಿತ ಸಂಸ್ಥೆಯನ್ನು ಅಮೆರಿಕಾ ಸಂಪರ್ಕಿಸಿಲ್ಲ. "ತೀರ್ಮಾನಕ್ಕೆ ಬಂದ ಆಧಾರದ ಬಗ್ಗೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ" ಎಂದು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.
"ಭಯೋತ್ಪಾದಕ ಗುಂಪುಗಳು ಸೇರಿದಂತೆ ರಾಷ್ಟ್ರದ ಆಡಳಿತೇತರ ಸಶಸ್ತ್ರ ಗುಂಪುಗಳ ವಿರುದ್ಧ ಹೋರಾಡುವಲ್ಲಿ ಪಾಕಿಸ್ತಾನದ ಪ್ರಯತ್ನಗಳು ಉತ್ತಮವಾಗಿದೆ " ಎಂದು ಪಾಕಿಸ್ತಾನವು ಯಾವುದೇ ಆಡಳಿತೇತರ ಶಸ್ತ್ರ ಗುಂಪು ಮಕ್ಕಳನ್ನು ಸೇನೆಗೆ ನೇಮಕ ಮಾಡುವ ಬಗ್ಗೆ ಅಥವಾ ಸೈನಿಕರಾಗಿ ಬಳಸುವ ಬಗ್ಗೆ ನಾವು ಬೆಂಬಲಿಸುವುದಿಲ್ಲಎಂದು ಹೇಳಿಕೆಯು ಒತ್ತಿಹೇಳಿತು.
ಪಾಕಿಸ್ತಾನವು "ಈ ಉಪಟಳದ ವಿರುದ್ಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ"ಹೋರಾಡಲು ಬದ್ಧವಾಗಿದೆ ಎಂದು ಅದು ಹೇಳಿದೆ. ಸಿಎಸ್‌ಪಿಎ ಪಟ್ಟಿಯು ಸೈನ್ಯದಲ್ಲಿ ಮಕ್ಕಳನ್ನು ನೇಮಕ ಮಾಡಿದ ಅಥವಾ ಬಳಸಿದ ವಿದೇಶಿ ಸರ್ಕಾರಗಳನ್ನು ಒಳಗೊಂಡಿದೆ. ಈ ಕುರಿತು ಪರಿಶೀಲಿಸಲ್ಪಟ್ಟ ಘಟಕಗಳಲ್ಲಿ ಸಶಸ್ತ್ರ ಪಡೆಗಳು, ಪೊಲೀಸ್, ಇತರ ಭದ್ರತಾ ಪಡೆಗಳು ಮತ್ತು ಸರ್ಕಾರ ಬೆಂಬಲಿತ ಸಶಸ್ತ್ರ ಗುಂಪುಗಳು ಸೇರಿವೆ. 2010 ರಲ್ಲಿ ಮೊದಲ ಸಿಎಸ್‌ಪಿಎ ಪಟ್ಟಿಯಲ್ಲಿ ಆರು ಸರ್ಕಾರಗಳನ್ನು ಗುರುತಿಸಲಾಗಿದೆ. ಈ ವರ್ಷ ಈ ಪಟ್ಟಿಯಲ್ಲಿರುವ ದೇಶಗಳ ಸಂಖ್ಯೆ 15 ಕ್ಕೆ ತಲುಪಿದೆ, ಇದುವರೆಗೆ ಪಾಕಿಸ್ತಾನ ಹಾಗೂ ಟರ್ಕಿ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲಾಗಿದೆ ಎಂದು ಪಟ್ಟಿ ವಿವರಿಸಿದೆ.
ಸಿಎಸ್‌ಪಿಎ ಈ ಕೆಳಗಿನ ಯುಎಸ್ ಕಾರ್ಯಕ್ರಮಗಳಟ್ಟಿಮಾಡಿದ ಸರ್ಕಾರಗಳನ್ನು ನಿಷೇಧಿಸುವ,ಅಂತರರಾಷ್ಟ್ರೀಯ ಮಿಲಿಟರಿ ಶಿಕ್ಷಣ ಮತ್ತು ತರಬೇತಿ, ವಿದೇಶಿ ಮಿಲಿಟರಿ ಹಣಕಾಸು, ಹೆಚ್ಚುವರಿ ರಕ್ಷಣಾ ಸಾಮಗ್ರಿ ಮತ್ತು ಶಾಂತಿಪಾಲನಾ ಕಾರ್ಯಾಚರಣೆಗಳು. ಶಾಂತಿಪಾಲನಾ ಕಾರ್ಯಾಚರಣೆ ಪ್ರಾಧಿಕಾರಕ್ಕೆ ಅನುಸಾರವಾಗಿ ಕೈಗೊಂಡ ಕೆಲವು ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಿಕೆ ಅಂತಹ ಸರ್ಕಾರಗಳಿಗೆ ಮಿಲಿಟರಿ ಸಾಮಗ್ರಿಗಳ ನೇರ ವಾಣಿಜ್ಯ ಮಾರಾಟಕ್ಕೆ ಪರವಾನಗಿ ನೀಡುವುದನ್ನು ಇದು ನಿಷೇಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


