ವಿದೇಶ

ಜೂಮ್ ಕಾಲ್ ನಲ್ಲೇ 900 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಭಾರತೀಯ ಮೂಲದ ಸಿಇಒ! 

ಅಮೆರಿಕ ಮೂಲದ ಸಂಸ್ಥೆಯಲ್ಲಿ ಭಾರತೀಯ ಮೂಲದ ಸಿಇಒ 900 ನೌಕರರನ್ನು (ಶೇ.9 ರಷ್ಟು ಕಾರ್ಮಿಕ ಶಕ್ತಿ) ಜೂಮ್ ಕಾಲ್ ನಲ್ಲಿ ಏಕಾಏಕಿ ವಜಾಗೊಳಿಸಿದ್ದಾರೆ.

ಜೂಮ್ ಕಾಲ್ ನಲ್ಲೇ 900 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ಭಾರತೀಯ ಮೂಲದ ಸಿಇಒ! 
ಸಾಂಕೇತಿಕ ಚಿತ್ರ
Published On :

ನ್ಯೂಯಾರ್ಕ್: ಅಮೆರಿಕ ಮೂಲದ ಸಂಸ್ಥೆಯಲ್ಲಿ ಭಾರತೀಯ ಮೂಲದ ಸಿಇಒ 900 ನೌಕರರನ್ನು (ಶೇ.9 ರಷ್ಟು ಕಾರ್ಮಿಕ ಶಕ್ತಿ) ಜೂಮ್ ಕಾಲ್ ನಲ್ಲಿ ಏಕಾಏಕಿ ವಜಾಗೊಳಿಸಿದ್ದಾರೆ. 

ಮಾರುಕಟ್ಟೆ ಕಾರ್ಯಕ್ಷಮತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯ ಕಾರಣ ನೀಡಿ ಏಕಾಏಕಿ 900 ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. 

ಬೆಟರ್.ಕಾಮ್ ನ ಸಿಇಒ ವಿಶಾಲ್ ಗರ್ಗ್ ಈ ಕ್ರಮ ಕೈಗೊಂಡಿದ್ದು, ನೀವು ಈ ಕರೆಯಲ್ಲಿದ್ದರೆ, ಕೆಲಸದಿಂದ ವಜಾಗೊಳ್ಳುವ ದುರದೃಷ್ಟಕರ ಗುಂಪಿನಲ್ಲಿದ್ದೀರಿ ಎಂದು ಜೂಮ್ ಸಭೆಯಲ್ಲಿ ಗರ್ಗ್ ತಿಳಿಸಿದ್ದಾರೆ.

ವರ್ಷದ ಈ ಅವಧಿಯಲ್ಲಿ ಉದ್ಯೋಗಕ್ಕೆ ಕತ್ತರಿ ಹಾಕುತ್ತಿರುವುದು ಕರುಳು ಹಿಂಡುತ್ತಿದೆ ಆದರೂ ಬ್ಯಾಲೆನ್ಸ್ ಶೀಟ್ ಹಾಗೂ ಮಾರುಕಟ್ಟೆಯ ಸ್ಥಿತಿಗಳಿಂದಾಗಿ ಈ ಕ್ರಮ ಕೈಗೊಳ್ಳಲೇಬೇಕಾಗಿದೆ ಎಂದು ಸಿಎಫ್ಒ ಕೆವಿನ್ ರ್ಯಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.