ಪಾಕಿಸ್ತಾನ: ಮೃತ ಶ್ರೀಲಂಕಾ ಪ್ರಜೆಯ ಬಹುತೇಕ ಮೂಳೆಗಳು ಮುರಿತ: ಪ್ರಧಾನಿ ಇಮ್ರಾನ್ ಖಾನ್ ನ್ಯಾಯದ ಭರವಸೆ
ಕಟ್ಟರ್ ಇಸ್ಲಾಮಿಸ್ಟ್ ಪಕ್ಷ 'ತೆಹ್ರೀಕ್ ಇ ಲಬ್ಬೈಕ್- ಪಾಕಿಸ್ತಾನ್' ಕಾರ್ಯಕರ್ತರು ಲಾಹೋರ್ ನಲ್ಲಿನ ಗಾರ್ಮೆಂಟ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಅದರ ಮ್ಯಾನೇಜರ್ ಶ್ರೀಲಂಕಾ ಪ್ರಜೆ ದಿಯವದನ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು.

ಕರಾಚಿ: ಕಟ್ಟರ್ ಇಸ್ಲಾಮಿಸ್ಟ್ ಪಕ್ಷ 'ತೆಹ್ರೀಕ್ ಇ ಲಬ್ಬೈಕ್- ಪಾಕಿಸ್ತಾನ್' ಕಾರ್ಯಕರ್ತರು ಲಾಹೋರ್ ನಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಅದರ ಮ್ಯಾನೇಜರ್ ಶ್ರೀಲಂಕಾ ಪ್ರಜೆ ದಿಯವದನ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ಆತ ಮೃತಪಟ್ಟಿದ್ದರು.
ದೇಹದ ಎಲ್ಲಾ ಭಾಗಗಳ ಮೂಳೆಗಳು ಮುರಿದಿರುವ ಮಾಹಿತಿ ಮರಣೋತ್ತರ ವರದಿಯಿಂದ ಬಹಿರಂಗವಾಗಿದೆ. ತಲೆಬುರುಡೆ ಮತ್ತು ದವಡೆ ಮೂಳೆಗಳು ಮುರಿತಕ್ಕೊಳಗಾಗಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಶ್ರೀಲಂಕಾ ಪ್ರಜೆ ಮೈಮೇಲೆ ಬೆಂಕಿ ಹಚ್ಚಿದ್ದರು. ಅದರ ಪರಿಣಾಮ ದೇಹದ ಶೇ.99 ಭಾಗ ಸುಟ್ಟು ಹೋಗಿತ್ತು.
ಮೃತರ ಸಂಬಂಧಿಕರು ಹತ್ಯೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗಿ ಆಗಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪಾಕ್ ಸಿಖ್ ವ್ಯಕ್ತಿಯಿಂದ ಸಿಖ್ ಧರ್ಮಕ್ಕೆ ಅಪಚಾರ, ಭಾರತೀಯ ಪತ್ರಕರ್ತ ದೂರು: ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಆದೇಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


