ದಕ್ಷಿಣ ಆಫ್ರಿಕಾದಲ್ಲಿ ಆತಂಕ ಸೃಷ್ಟಿಸಿರುವ 'ಓಮಿಕ್ರಾನ್': ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕಾರಿಗಳ ತಂಡ ನಿಯೋಜನೆ
ಭಾರತದ ಕರ್ನಾಟಕಕ್ಕೆ ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಮೊದಲು ಕಾಲಿಟ್ಟಿರುವ ಓಮಿಕ್ರಾನ್ (Omicron) ರೂಪಾಂತರಿ ಕೊರೋನಾ ವೈರಸ್ ಮೊದಲು ಪತ್ತೆಯಾಗಿರುವುದು ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯ (Gauteng province)ದಲ್ಲಿ.

ಜೊಹಾನ್ಸ್ ಬರ್ಗ್ (JOHANNESBURG): ಭಾರತದ ಕರ್ನಾಟಕಕ್ಕೆ ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಮೊದಲು ಕಾಲಿಟ್ಟಿರುವ ಓಮಿಕ್ರಾನ್ (Omicron) ರೂಪಾಂತರಿ ಕೊರೋನಾ ವೈರಸ್ ಮೊದಲು ಪತ್ತೆಯಾಗಿರುವುದು ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯ (Gauteng province)ದಲ್ಲಿ. ಇಂದು ಕನಿಷ್ಠವೆಂದರೂ 24 ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಅಧಿಕಾರಿಗಳು ಹೇಳಿದ್ದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ.
ಈ ಹೊತ್ತಿನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಮತ್ತು ಸೋಂಕು ಪತ್ತೆಯಾದವರ ಪ್ರಾಥಮಿಕ, ದ್ವಿತೀಯ ಸಂಪರ್ಕಕ್ಕೆ ಯಾರೆಲ್ಲಾ ಬಂದಿದ್ದಾರೆ ಎಂದು ತಿಳಿಯಲು ದೇಶಗಳು ಮುಂದಾಗಿವೆ. ಓಮಿಕ್ರಾನ್ ವೈರಸ್ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ದಿನಂಪ್ರತಿ 11 ಸಾವಿರಕ್ಕೂ ಮಂದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಶರವೇಗದಲ್ಲಿ ಈ ರೂಪಾಂತರಿ ಕೊರೋನಾ ಹಬ್ಬುತ್ತಿದೆ. ಈ ಹಿಂದೆ ನವೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೊರೋನಾ ಪ್ರತಿದಿನ ದೇಶಗಳಲ್ಲಿ ಸರಾಸರಿ 200ರಿಂದ 300ರಷ್ಟು ಪತ್ತೆಯಾಗುತ್ತಿದ್ದರೆ ಈಗ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಿದೆ.
ಸೋಂಕನ್ನು ಪತ್ತೆಹಚ್ಚಿ ಹರಡುವಿಕೆಯನ್ನು ತಡೆಯಲು ಕಣ್ಗಾವಲು ಮತ್ತು ಸೋಂಕಿತರು ಯಾರ ಸಂಪರ್ಕಕ್ಕೆ ಹೋಗುತ್ತಾರೆ ಎಂದು ಪತ್ತೆಹಚ್ಚಲು ನಾವು ಗೌಟೆಂಗ್ ಪ್ರಾಂತ್ಯದಲ್ಲಿ ತಂಡವನ್ನು ನಿಯೋಜಿಸುತ್ತಿದ್ದೇವೆ ಎಂದು ಆಫ್ರಿಕಾದ WHO ಪ್ರಾದೇಶಿಕ ತುರ್ತು ನಿರ್ದೇಶಕ ಡಾ ಸಲಾಮ್ ಗುಯೆ ತಿಳಿಸಿದ್ದಾರೆ. ತಂಡವು ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಜೀನೋಮಿಕ್ ಸೀಕ್ವೆನ್ಸಿಂಗ್ ಕುರಿತು ಕೆಲಸ ಮಾಡುತ್ತಿದೆ. ದಕ್ಷಿಣ ಆಫ್ರಿಕಾದ ಆರ್ಥಿಕ ಕೇಂದ್ರವಾಗಿರುವ ಗೌಟೆಂಗ್ ಪ್ರಾಂತ್ಯದಲ್ಲಿ ಕಳೆದ ವಾರದಲ್ಲಿ ಸುಮಾರು ಶೇಕಡಾ 80ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ (NICD), ಸುಮಾರು ಶೇಕಡಾ 75ರಷ್ಟು ಕೋವಿಡ್ ಸೋಂಕಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಓಮಿಕ್ರಾನ್ ರೂಪಾಂತರಿ ವರದಿಯಾಗಿದೆ ಎಂದು ಹೇಳುತ್ತದೆ. ನವೆಂಬರ್ ತಿಂಗಳಿನಲ್ಲಿ, ನಾವು 249 ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಮಾಡಿದ್ದೆವು. ಅವುಗಳಲ್ಲಿ 183 ಅನ್ನು ಓಮಿಕ್ರಾನ್ ಎಂದು ಪರಿಗಣಿಸಲಾಗಿದೆ ಎಂದು NICD ಕ್ಲಿನಿಕಲ್ ಮೈಕ್ರೋಬಯಾಲಜಿಸ್ಟ್ ಪ್ರೊಫೆಸರ್ ಆನ್ ವಾನ್ ಗಾಟ್ಬರ್ಗ್ ಹೇಳಿದ್ದಾರೆ.
WHOನ ಆಫ್ರಿಕಾದ ನಿರ್ದೇಶಕ ಡಾ. ಮತ್ಶಿಡಿಸೊ ಮೊಯೆಟಿ, ಆಫ್ರಿಕಾದಾದ್ಯಂತ ವ್ಯಾಪಿಸುತ್ತಿರುವ ಪ್ರಕರಣಗಳ ಉಲ್ಬಣವನ್ನು ನಿಲ್ಲಿಸಬೇಕು, ಆಗ ಮಾತ್ರ ಓಮಿಕ್ರಾನ್ ನಿಯಂತ್ರಣಕ್ಕೆ ಬರಬಹುದು ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


