ಕಾಬೂಲ್ ನ ಅಮೆರಿಕ ರಾಯಭಾರ ಕಚೇರಿ ಕಾರ್ಯನಿರ್ವಹಣೆ ಸ್ಥಗಿತ
ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಘೋಷಿಸಿದೆ.

ಕಾಬೂಲ್: ಅಫ್ಘಾನಿಸ್ತಾನದಿಂದ ಅಮೆರಿಕ ಸೈನಿಕರು ಮತ್ತು ಸಿಬ್ಬಂದಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡ ನಂತರ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ಘೋಷಿಸಿದೆ. ಆದರೆ ರಾಯಭಾರ ಕಚೇರಿಯು ದೋಹಾದಿಂದ ಅಮೆರಿಕದ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವುದಾಗಿ ಹೇಳಿದೆ.
ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಮತ್ತು ಅವರ ಕುಟುಂಬಗಳಿಗೆ ದೋಹಾದಿಂದ ಸಹಾಯ ಮಾಡುವುದನ್ನು ಮುಂದುವರಿಸಲಾಗುವುದು. ಅಮೆರಿಕ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಗಳನ್ನು ದೋಹಾಕ್ಕೆ ವರ್ಗಾಯಿಸಿದೆ ಎಂದು ತಿಳಿಸಿದೆ.
"ರಾಯಭಾರ ಕಚೇರಿಯು ಸ್ಮಾರ್ಟ್ ಟ್ರಾವೆಲರ್ ದಾಖಲಾತಿ ಕಾರ್ಯಕ್ರಮ STEP, ರಾಯಭಾರ ವೆಬ್ ಪುಟ, Travel.State.Gov ಮತ್ತು Facebook ಮತ್ತು Twitter ಮೂಲಕ ಮಾಹಿತಿ ನೀಡುವುದನ್ನು ಮುಂದುವರಿಸುತ್ತದೆ. ಅಫ್ಘಾನಿಸ್ತಾನದ ಹೊರಗೆ ಕಾನ್ಸುಲರ್ ಸೇವೆಗಳು ಲಭ್ಯವಿವೆ ಎಂದು ಹೇಳಿದೆ.
ತಾಲಿಬಾನ್ ನಾಯಕರು ಮಂಗಳವಾರ ಕಾಬೂಲ್ ವಿಮಾನ ನಿಲ್ದಾಣದ ನಿಯಂತ್ರಣವನ್ನು ವಹಿಸಿಕೊಂಡಿದ್ದು, ವಿಮಾನ ನಿಲ್ದಾಣದ ಏಕೈಕ ರನ್ ವೇ ಮೂಲಕ ಸಾಂಕೇತಿಕ ವಾಕ್ ಮೂಲಕ ದೇಶದಿಂದ ಕೊನೆಯ ಅಮೆರಿಕ ವಿಮಾನ ನಿರ್ಗಮಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


