ವಿದೇಶ

20 ಮಹಡಿಗಳ ಗಗನಚುಂಬಿ ಕಟ್ಟಡ ಉರಿಯುತ್ತಿದೆ ನೋಡಾ...: ವೈರಲ್ ವಿಡಿಯೊ

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡದ ಒಂದೊಂದು ಕೋಣೆಯ ಬಾಗಿಲನ್ನೂ ತಟ್ಟಿ ಯಾರೊಬ್ಬರೂ ಕಟ್ಟಡದಲ್ಲಿ ಸಿಲುಕಿಕೊಂಡಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡಿದ್ದಾರೆ

20 ಮಹಡಿಗಳ ಗಗನಚುಂಬಿ ಕಟ್ಟಡ ಉರಿಯುತ್ತಿದೆ ನೋಡಾ...: ವೈರಲ್ ವಿಡಿಯೊ
ಕಟ್ಟಡ ಉರಿಯುತ್ತಿರುವ ದೃಶ್ಯ
Published On :

ಮಿಲಾನ್: ಇಟಲಿಯ ಮಿಲಾನ್ ನಗರದಲ್ಲಿನ ಬಹುಮಹಡಿಗಳ ಜನವಸತಿ ಕಟ್ಟಡ ಜನರು ನೋಡ ನೋಡುತ್ತಿರುವಂತೆಯೇ ಸುಟ್ಟು ಭಸ್ಮವಾಗಿದೆ. 

ಅದೃಷ್ಟವಶಾತ್ ಬೆಂಕಿ ಪೂರ್ತಿ ಕಟ್ಟಡಕ್ಕ ಹಬ್ಬುವ ಮುನ್ನವೇ ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹೀಗಾಗಿ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. 

200 ಅಡಿಗಳಷ್ಟು ಎತ್ತರದ 20 ಮಹಡಿಗಳ ಕಟ್ಟಡ ಹೊತ್ತಿ ಉರಿಯಲು ಕಾರಣ ಇನ್ನೂ ಪತ್ತೆಯಾಗಿಲ್ಲ. ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿ ಉರಿಯುತ್ತಿರುವ ವಿಡಿಯೊ ಇದೀಗ ವೈರಲ್ ಆಗಿದೆ. 

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಟ್ಟಡದ ಒಂದೊಂದು ಕೋಣೆಯ ಬಾಗಿಲನ್ನೂ ತಟ್ಟಿ ಯಾರೊಬ್ಬರೂ ಕಟ್ಟಡದಲ್ಲಿ ಸಿಲುಕಿಕೊಂಡಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡಿದ್ದಾರೆ ಎಂದು ಮೇಯರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.