ವಿದೇಶ

ತಾಲಿಬಾನ್ ಜೊತೆ ಭಾರತದ ಮಾತುಕತೆ ತಳ್ಳಿಹಾಕುವಂತಿಲ್ಲ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಸುಳಿವು?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಗುರುತಿಸಿ ಮಾತುಕತೆ ನಡೆಸಲು ರಷ್ಯಾ, ಚೀನಾಗಳು ತುದಿಗಾಲಲ್ಲಿ ನಿಂತಿರುವಂತಿದೆ.

ತಾಲಿಬಾನ್ ಜೊತೆ ಭಾರತದ ಮಾತುಕತೆ ತಳ್ಳಿಹಾಕುವಂತಿಲ್ಲ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಸುಳಿವು?
ಇಎಎಂ ಜೈಶಂಕರ್
Published On :

ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಗುರುತಿಸಿ ಮಾತುಕತೆ ನಡೆಸಲು ರಷ್ಯಾ, ಚೀನಾಗಳು ತುದಿಗಾಲಲ್ಲಿ ನಿಂತಿರುವಂತಿದೆ. ಇದಕ್ಕೆ ಅಮೆರಿಕವೂ ಹೊರತೇನೂ ಆಗಿಲ್ಲ. ಆದರೆ ಇನ್ನುಳಿದ ಜಾಗತಿಕ ಸಮುದಾಯಕ್ಕೆ ಅಫ್ಘಾನ್ ವಿಷಯದಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಇನ್ನೂ ಗೊಂದಲಗಳಿವೆ. 

ಇಂತಹ ಪರಿಸ್ಥಿತಿಯಲ್ಲಿ ಭಾರತದ ವಿದೇಶಾಂಗ ಸಚಿವರು ಮಹತ್ವದ  ಸೂಚನೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಯುಎನ್ಎಸ್ ಸಿ ಸಭೆಯಲ್ಲಿ ಭಾಗವಹಿಸಲು ಆ.16 ರಂದು ನ್ಯೂಯಾರ್ಕ್ ಗೆ ಬಂದಿರುವ ವಿದೇಶಾಂಗ ಸಚಿವರು, ತಾಲೀಬಾನ್ ಜೊತೆ ಭಾರತ ಮಾತುಕತೆ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂಬ ಅರ್ಥ ಬರುವ ಹೇಳಿಕೆ ನೀಡಿದ್ದಾರೆ. 

ತಂಡದ ಪ್ರತಿನಿಧಿಗಳು ಕಾಬೂಲ್ ನಲ್ಲಿದ್ದಾರೆ. "ಏನು ಎದುರಾಗುತ್ತೋ ಅದನ್ನು ಹಾಗೆಯೇ ಸ್ವೀಕರಿಸಬೇಕು" ಎಂದು ಜೈಶಂಕರ್ ಮಾರ್ಮಿಕವಾಗಿ ನುಡಿದಿದ್ದಾರೆ. 

ಕಾಬೂಲ್ ನಲ್ಲಿ ಪರಿಸ್ಥಿತಿಗಳ ಬೆಳವಣಿಗೆಯನ್ನು ನೋಡುತ್ತಿದ್ದೇವೆ. "ತಾಲೀಬಾನ್ ಹಾಗೂ ಅದರ ಪ್ರತಿನಿಧಿಗಳು ಕಾಬೂಲ್ ಗೆ ಬಂದಿದ್ದು, ಅಲ್ಲಿಂದ ನಾವು ಎದುರು ನೋಡುತ್ತಿದ್ದೇವೆ. ಈಗಲೇ ಏನನ್ನೂ ಹೇಳುವುದಕ್ಕೆ ಸರಿಯಾದ ದಿನಗಳಲ್ಲ" ಎಂದು ಜೈಶಂಕರ್ ತಿಳಿಸಿದ್ದಾರೆ. 

"ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಅಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸುರಕ್ಷತೆ ಹಾಗೂ ಭದ್ರತೆ ಭಾರತಕ್ಕೆ ಆದ್ಯತೆ ಹಾಗೂ ಗಮನ ಕೇಂದ್ರೀಕೃತವಾಗಿರುವ ಅಂಶ" ಎಂದು ಜೈಶಂಕರ್ ಹೇಳಿದ್ದಾರೆ. "ಅಫ್ಘಾನಿಸ್ತಾದ ಪರಿಸ್ಥಿತಿಯೂ ಅಮೆರಿಕ ಭೇಟಿಯ ಕೇಂದ್ರೀಕೃತ ಅಂಶವಾಗಿದೆ" ಎಂದೂ ಜೈಶಂಕರ್ ತಿಳಿಸಿದ್ದಾರೆ. 

"ಸದ್ಯದ ಪರಿಸ್ಥಿತಿ ನಾವೂ ಇಲ್ಲರಂತೆಯೇ ಇದ್ದೇವೆ. ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ, ಭಾರತೀಯರ ಸುರಕ್ಷತೆ ಹಾಗೂ ಭದ್ರತೆ ಭಾರತಕ್ಕೆ ಆದ್ಯತೆ ಹಾಗೂ ಗಮನ ಕೇಂದ್ರೀಕೃತವಾಗಿರುವ ಅಂಶ ಎಂದು ವಿಶ್ವಸಂಸ್ಥೆ ಶಾಂತಿಪಾಲಕರ ಯುಎನ್ಎಸ್ ಸಿ ಸೆಷನ್ ನೇತೃತ್ವ ವಹಿಸಿ ಮಾತನಾಡಿದ ಬಳಿಕ ಜೈಶಂಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.