ಬ್ರಿಟನ್: ಭಾರತೀಯ ಸ್ವಾತಂತ್ರ್ಯ ದಿನವನ್ನು 'ರಾಜಿನಾಮೆ ಮೋದಿ' ಬ್ಯಾನರ್‌ನೊಂದಿಗೆ ಆಚರಿಸಿದ ಪ್ರತ್ಯೇಕತವಾದಿ ಗುಂಪು!
ಕೆಲವು ಪ್ರತ್ಯೇಕತಾವಾದಿ ಗುಂಪುಗಳನ್ನು ಒಳಗೊಂಡಂತೆ ವಿವಿಧ ಸಂಘಟನೆಗಳು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ರಾಜಿನಾಮೆ ಮೋದಿ ಬ್ಯಾನರ್‌ನೊಂದಿಗೆ ಪ್ರತಿಭಟನೆಯೊಂದಿಗೆ ಆಚರಿಸಿತು.

ಲಂಡನ್: ಕೆಲವು ಪ್ರತ್ಯೇಕತಾವಾದಿ ಗುಂಪುಗಳನ್ನು ಒಳಗೊಂಡಂತೆ ವಿವಿಧ ಸಂಘಟನೆಗಳು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ರಾಜಿನಾಮೆ ಮೋದಿ ಬ್ಯಾನರ್‌ನೊಂದಿಗೆ ಪ್ರತಿಭಟನೆಯೊಂದಿಗೆ ಆಚರಿಸಿತು.
ಪೂರ್ವ ಯೋಜಿತ ಪ್ರದರ್ಶನಕ್ಕಾಗಿ ಹೈಕಮಿಷನ್ ಕಟ್ಟಡದ ಹೊರಗೆ ನಿರ್ಮಿಸಲಾದ ಬ್ಯಾರಿಕೇಡ್‌ಗಳ ಸುತ್ತ ಮಹಾನಗರ ಪೊಲೀಸ್ ಅಧಿಕಾರಿಗಳ ಮಹತ್ವದ ಉಪಸ್ಥಿತಿಯ ನಡುವೆ ನಗರದ ಅಲ್ಡ್‌ವಿಚ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ 'ಕಿಸಾನ್ ಮಜ್ದೂರ್ ಏಕತಾ' ಎಂದು ಬರೆಯುವ ಫಲಕಗಳನ್ನು ಹಿಡಿದುಕೊಂಡು ಭಾರತೀಯ ರೈತರಿಗೆ ಬೆಂಬಲವಾಗಿ ಘೋಷಣೆಗಳನ್ನು ಕೂಗಿದರು.
ವಲಸಿಗರ ನೇತೃತ್ವದ ಜನಾಂಗೀಯ ವಿರೋಧಿ ಸಂಘಟನೆ ದಕ್ಷಿಣ ಏಷ್ಯಾ ಸಾಲಿಡಾರಿಟಿ ಗ್ರೂಪ್ ಶನಿವಾರ ರಾತ್ರಿಯಿಡೀ ಸಣ್ಣ ಜಾಗರಣೆಯನ್ನು ನಡೆಸಿತು. ಅಲ್ಲದೆ ಭಾನುವಾರ ಮುಂಜಾನೆ ವೆಸ್ಟ್ಮಿನಿಸ್ಟರ್ ಸೇತುವೆಯಿಂದ 'ರಾಜಿನಾಮೆ ಮೋದಿ' ಎಂದು ಬರೆಯುವ ಬ್ಯಾನರ್ ಅನ್ನು ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


