ಕೋವಿಡ್-19 ಏರಿಕೆ: ಭಾರತದಿಂದ ವಾಪಸ್ಸಾಗುವಂತೆ ತನ್ನ ನಾಗರಿಕರಿಗೆ ಅಮೆರಿಕಾ ಕರೆ
ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಶೀಘ್ರವೇ ವಾಪಸ್ಸಾಗುವಂತೆ ಸೂಚನೆ ನೀಡಿದೆ.

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿರುವ ಕಾರಣ ಅಮೆರಿಕದ ನಾಗರಿಕರು ಭಾರತಕ್ಕೆ ಹೋಗದಂತೆ ಹಾಗೂ ಭಾರತದಲ್ಲಿರುವವರು ಕೂಡಲೇ ದೇಶಕ್ಕೆ ಮರಳುವಂತೆ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ಸೂಚನೆ ನೀಡಿದೆ.
ಕೊರೊನಾದಿಂದಾಗಿ ದೇಶದಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಕಡಿಮೆಯಾಗಿ ಜೀವನ ಬಹಳ ದುಸ್ತರವಾಗುತ್ತಿದೆ, ಹೀಗಾಗಿ ಅಮೆರಿಕದ ನಾಗರಿಕರು ಬೇಗ ಮರಳುವುದು ಬಹಳ ಒಳ್ಳೆಯದು ಎಂದು ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಆರೋಗ್ಯ ಇಲಾಖೆ, ಭಾರತವನ್ನು ಬಿಟ್ಟು ಬರಲು ಇಚ್ಛಿಸುವ ನಾಗರಿಕರು ಈಗಿರುವ ವಾಣಿಜ್ಯ ಸಾರಿಗೆ ಅವಕಾಶಗಳನ್ನು ಬಳಸಿಕೊಳ್ಳಬೇಕು. ಸದ್ಯಕ್ಕೆ ಭಾರತದಿಂದ ಅಮೆರಿಕಕ್ಕೆ ದಿನನಿತ್ಯ ನೇರ ವಿಮಾನ ಸೌಲಭ್ಯವಿದೆ. ಹಾಗೂ ಫ್ರಾಂಕ್ಫರ್ಟ್ನಿಂದ ಆಗಮಿಸುವ ವಿಮಾನಗಳೂ ಲಭ್ಯವಿವೆ ಎಂದು ಹೇಳಿದೆ. ಕೊರೋನ ಹೆಚ್ಚಳದ ಕಾರಣ ಹಲವು ರಾಷ್ಟ್ರಗಳು ಈಗಾಗಲೇ ಭಾರತದಿಂದ ಬರುವ ವಿಮಾನ ಸಂಚಾರ ರದ್ದುಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


