ವಿದೇಶ

ಭಾರತದ ಅನುಮತಿಯಿಲ್ಲದೇ 'ನೌಕಾಪಡೆ ನಡೆಸಿದ ಕಾರ್ಯಾಚರಣೆ'ಗೆ ಅಮೆರಿಕ ಸಮರ್ಥನೆ

ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸಿದ್ದನ್ನು ಅಮೆರಿಕ ಸಮರ್ಥಿಸಿಕೊಂಡಿದೆ.

ಭಾರತದ ಅನುಮತಿಯಿಲ್ಲದೇ 'ನೌಕಾಪಡೆ ನಡೆಸಿದ ಕಾರ್ಯಾಚರಣೆ'ಗೆ ಅಮೆರಿಕ ಸಮರ್ಥನೆ
ಭಾರತದ ಅನುಮತಿಯಿಲ್ಲದೇ ' ನೌಕಾಪಡೆ ನಡೆದಿದ ಕಾರ್ಯಾಚರಣೆ'ಗೆ ಅಮೆರಿಕ ಸಮರ್ಥನೆ
Published On :

ವಾಷಿಂಗ್ ಟನ್: ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’  ನಡೆಸಿದ್ದನ್ನು ಅಮೆರಿಕ ಸಮರ್ಥಿಸಿಕೊಂಡಿದೆ. 

ನ್ಯಾವಿಗೇಷನ್ ಆಪರೇಷನ್ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಇತ್ತ ಭಾರತ ಅಮೆರಿಕಾದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದು ತೀವ್ರ ಕಳವಳ ವ್ಯಕ್ತಪಡಿಸಿದೆ. 

"ಯುಎಸ್ಎಸ್ ಜಾನ್ ಪೌಲ್ ಜಾನ್ಸ್ ನೇವಿ ಡೆಸ್ಟ್ರಾಯರ್ ಮಾಲ್ಡೀವ್ಸ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ನಿಯಮ ಉಲ್ಲಂಘನೆ ಮಾಡದೇ ಕಾರ್ಯಾಚರಣೆ ನಡೆಸಿದೆ" ಎಂದು ಪೆಂಟಗನ್ ನ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.ಇದು ಅಂತಾರಾಷ್ಟ್ರೀಯ ಕಾನೂನಿನ ವ್ಯಾಪ್ತಿಯಲ್ಲೇ ಇದ್ದು, ಉಲ್ಲಂಘನೆಯಾಗಿಲ್ಲ ಎಂದು ಪೆಂಟಗನ್ ಸಮರ್ಥಿಸಿಕೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.