ಜಪಾನ್ ಆಡಳಿತ ಪಕ್ಷದ ನಾಯಕತ್ವ ಗೆದ್ದ ಸೂಗಾ; ಶೀಘ್ರದಲ್ಲೇ ಪ್ರಧಾನಿಯಾಗಿ ಘೋಷಣೆ
ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೇ ಸೂಗಾ ಆಡಳಿತಾರೂಢ ಲಿಬರಲ್ ಡೆಮಾಕ್ರೆಟಕ್ ಪಾರ್ಟಿಯ ನಾಯಕತ್ವದ ಮತದಾನದಲ್ಲಿ ಜಯಗಳಿಸಿದ್ದು, ಈಗ ಪ್ರಧಾನಮಂತ್ರಿಯ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.

ಟೋಕಿಯೋ: ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೇ ಸೂಗಾ ಆಡಳಿತಾರೂಢ ಲಿಬರಲ್ ಡೆಮಾಕ್ರೆಟಕ್ ಪಾರ್ಟಿಯ ನಾಯಕತ್ವದ ಮತದಾನದಲ್ಲಿ ಜಯಗಳಿಸಿದ್ದು, ಈಗ ಪ್ರಧಾನಮಂತ್ರಿಯ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಸೂಗಾ 377 ಮತಗಳನ್ನು ಗಳಿಸಿದರು. ಇವರ ಎದುರಾಳಿಯಾಗಿದ್ದ ಮಾಜಿ ವಿದೇಶಾಂಗ ಸಚಿವ ಫೂಮಿಯೋ ಕಿಸಿದಾ ಕೇವಲ 89 ಹಾಗೂ ಮಾಜಿ ರಕ್ಷಣಾ ಸಚಿವ ಶಿಗೇರು ಇಶಿಬಾ 68 ಮತಗಳನ್ನು ಗಳಿಸಿದರು.
ಬುಧವಾರ ಜಪಾನ್ ಸಂಸತ್ತು ಸೂಗಾ ಅವರನ್ನು ಸರ್ಕಾರದ ಮುಖ್ಯಸ್ಥನಾಗಿ ಘೋಷಿಸಲಿದೆ. ಇವರು ದೀರ್ಘಕಾಲ ಸೇವೆ ಸಲ್ಲಿಸಿ ಅನಾರೋಗ್ಯದ ಹಿನ್ನೆಲೆಯಲ್ಲಿ ಹುದ್ದೆಗೆ ರಾಜೀನಾಮೆ ನೀಡಿರುವಮಾಜಿ ಪ್ರಧಾನಿ ಶಿಂಜೋ ಅಬೆ ಸ್ಥಾನಕ್ಕೆ ನೇಮಕಗೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


