ಕೊರೋನಾ ವೈರಾಣು ಬಗ್ಗೆ ಭೀಕರ ಸತ್ಯ ಬಹಿರಂಗಪಡಿಸಿದ ಚೀನಾ ವೈರಾಲಜಿಸ್ಟ್
ಕೊರೋನಾ ಜಗತ್ತಿನಾದ್ಯಂತ ಹರಡತೊಡಗಿ 9 ತಿಂಗಳಾಗುತ್ತಾ ಬಂದಿದ್ದರೂ ಅದರ ಸೃಷ್ಟಿಯ ರಹಸ್ಯ ಇನ್ನೂ ಬಹಿರಂಗಗೊಂಡಿಲ್ಲ.

ಕೊರೋನಾ ಜಗತ್ತಿನಾದ್ಯಂತ ಹರಡತೊಡಗಿ 9 ತಿಂಗಳಾಗುತ್ತಾ ಬಂದಿದ್ದರೂ ಅದರ ಸೃಷ್ಟಿಯ ರಹಸ್ಯ ಇನ್ನೂ ಬಹಿರಂಗಗೊಂಡಿಲ್ಲ.
ಈ ನಡುವೆ ಕೊರೋನಾ ವೈರಾಣುವನ್ನು ಚೀನಾದ ವುಹಾನ್ ಪ್ರಯೋಗಾಲಯದಲ್ಲೇ ಮನುಷ್ಯರು ಸೃಷ್ಟಿಸಿದ್ದು ಎಂಬ ಗುಮಾನಿಗಳೂ ಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಚೀನಾದ ವೈರಾಲಜಿಸ್ಟ್ ಒಬ್ಬರು ಕೊರೋನಾ ವೈರಾಣು ವುಹಾನ್ ನ ಸರ್ಕಾರಿ ಪ್ರಯೋಗಾಲಯದಲ್ಲಿ ಮನುಷ್ಯರೇ ನಿರ್ಮಿಸಿದ್ದು ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದು, ಇದನ್ನು ಸಾಬೀತುಪಡಿಸುವುದಕ್ಕೆ ತಮ್ಮ ಬಳಿ ಪುರಾವೆ ಇದೆ ಹೇಳಿದ್ದಾರೆ.
ಬ್ರಿಟೀಷ್ ಟಾಕ್ ಶೋ ನಲ್ಲಿ ಮಾತನಾಡಿರುವ ಚೀನಾ ವೈರಾಲಜಿಸ್ಟ್ ಡಾ. ಲೀ ಮೆಂಗ್ ಯಾನ್ ಅವರು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹಾಂಕ್ ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಲ್ಲಿ ವೈರಾಲಜಿ ಹಾಗೂ ಇಮ್ಯುನಾಲಜಿಯಲ್ಲಿ ಪರಿಣಿತರಾಗಿರುವ ಡಾ. ಲೀ ಮೆಂಗ್ ಯಾನ್ ಅವರಿಗೆ ವುಹಾನ್ ನಲ್ಲಿ ಕಂಡುಬಂದಿರುವ ಹೊಸ ನ್ಯುಮೋನಿಯಾವನ್ನು ಇನ್ವೆಸ್ಟಿಗಟ್ ಮಾಡುವ ಕೆಲಸಕ್ಕೆ ನಿಯೋಜಿಸಿದ್ದರು. ಈ ವೇಳೆ ಹಲವು ಮುಚ್ಚಿಹಾಕಿರುವ ಸಂಗತಿಗಳು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಡಿಸೆಂಬರ್ ಹಾಗೂ ಜನವರಿ ಮಧ್ಯದಲ್ಲಿ ಒಟ್ಟು ಎರಡು ಬಾರಿ ಅಧ್ಯಯನ ನಡೆಸಿರುವ ಡಾ. ಲೀ ಮೆಂಗ್ ಈಗ ಅಮೆರಿಕಾದಲ್ಲಿದ್ದಾರೆ.
ತಮ್ಮ ಗಮನಕ್ಕೆ ಬಂದ ಅಂಶಗಳನ್ನು ತಮ್ಮ ಹಿರಿಯ ಅಧಿಕಾರಿ ಹಾಗೂ ಡಬ್ಲ್ಯುಹೆಚ್ಒಗೆ ತಿಳಿಸಲು ಯತ್ನಿಸಿದೆ. ಆದರೆ ನನಗೆ ಮೌನವಾಗಿರುವಂತೆ ಎಚ್ಚರಿಕೆ ನೀಡಲಾಯ್ತು. ಚೀನಾದ ಕಮ್ಯುನಿಸ್ಟ್ ಪಕ್ಷ ಕೊರೋನಾಗೆ ಸಂಬಂಧಿಸಿದಂತೆ ನಿಸ್ಸಂಶಯವಾಗಿ ಮಾಹಿತಿಗಳನ್ನು ಮುಚ್ಚಿಡುತ್ತಿದೆ. ಇದು ಹೈ ಮ್ಯುಟೆಂಟ್ ವೈರಸ್ ಆಗಿದ್ದು, ಅತ್ಯಂತ ಅಪಾಯಕಾರಿಯೂ ಆಗಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಾಣು ನೈಸರ್ಗಿಕ ಸೃಷ್ಟಿಯಲ್ಲ, ಅದು ವುಹಾನ್ ನ ಸರ್ಕಾರಿ ನಿಯಂತ್ರಣದ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿರುವುದು, ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಡಾ. ಲೀ ಮೆಂಗ್ ಯಾನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


