ರಾಜನಾಥ ಸಿಂಗ್ ರಷ್ಯಾ ಭೇಟಿ: ಎಕೆ-47 203 ರೈಫಲ್ ಒಪ್ಪಂದ ಅಂತಿಮ, ಭಾರತದಲ್ಲೇ ಉತ್ಪಾದನೆ!
ರಕ್ಷಣಾ ಸಚಿವ ರಾಜನಾಥ ಸಿಂಗ್ ರಷ್ಯಾಗೆ ಭೇಟಿ ನೀಡಿದ್ದು ಈ ವೇಳೆ ಎಕೆ-47 203 ಉತ್ಪಾದನೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.

ಮಾಸ್ಕೋ: ರಕ್ಷಣಾ ಸಚಿವ ರಾಜನಾಥ ಸಿಂಗ್ ರಷ್ಯಾಗೆ ಭೇಟಿ ನೀಡಿದ್ದು ಈ ವೇಳೆ ಎಕೆ-47 203 ಉತ್ಪಾದನೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.
ಭಾರತದಲ್ಲೇ ಎಕೆ 47 ರೈಫಲ್ ನ ಅತ್ಯಾಧುನಿಕ ಮಾದರಿ ಆಗಿರುವ ಎಕೆ-47 203 ರೈಫಲ್ ಗಳನ್ನು ಉತ್ಪಾದನೆಯ ಮಾಡಲಾಗುತ್ತದೆ.
ಭಾರತೀಯ ಸೇನೆಗೆ 7,70,000 ಎಕೆ-47 203 ರೈಫಲ್ ಗಳ ಅಗತ್ಯ ಇದ್ದು ಈ ಪೈಕಿ 1 ಲಕ್ಷ ರೈಫಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇನ್ನುಳಿದ ರೈಫಲ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ರಷ್ಯಾದ ಸ್ಪುಟ್ನಿಕ್ ಸುದ್ದಿ ಸಂಸ್ಧೆ ವರದಿ ಮಾಡಿದೆ.
ಇಂಡೋ-ರಷ್ಯಾ ರೈಫಲ್ಸ್ ಪ್ರೈವೇಟ್ ಲಿಮಿಟೆಡ್(ಐಆರ್ಆರ್ಆರ್ಎಲ್) ಜಂಟಿ ಉದ್ಯಮದ ಮುಂದಾಳತ್ವದಲ್ಲಿ ಎಕೆ-47 203 ರೈಫಲ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


