ಪ್ರಮುಖ ಅಲ್‌ಖೈದಾ ನಾಯಕ ಮಸ್ರಿ ಹತ್ಯೆ: ಹೊಣೆ ಹೊತ್ತ ಅಫ್ಗಾನ್ ಗೂಢಚಾರಿಕೆ ಏಜೆನ್ಸಿ
ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಪ್ರಮುಖ ಅಲ್ ಖೈದಾ ಕಮಾಂಡರ್ ಅಬು ಮುಹ್ಸೆನ್ ಮಸ್ರಿ ಅನ್ನು ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ (ಎನ್‌ಡಿಎಸ್) ತಿಳಿಸಿದೆ.

ಕಾಬುಲ್: ಅಫ್ಗಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಪ್ರಮುಖ ಅಲ್ ಖೈದಾ ಕಮಾಂಡರ್ ಅಬು ಮುಹ್ಸೆನ್ ಮಸ್ರಿ ಅನ್ನು ಹತ್ಯೆ ಮಾಡಿರುವುದಾಗಿ ಗೂಢಚಾರ ಏಜೆನ್ಸಿ ರಾಷ್ಟ್ರೀಯ ಭದ್ರತೆ ನಿರ್ದೇಶನಾಲಯ (ಎನ್‌ಡಿಎಸ್) ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶನಾಲಯ, ಘಜನಿ ಪ್ರಾಂತ್ಯದಲ್ಲಿ ಎನ್‌ಡಿಎಸ್ ವಿಶೇಷ ಪಡೆಯ ಕಾರ್ಯಾಚರಣೆಯ ಪರಿಣಾಮವಾಗಿ ಭಾರತೀಯ ಉಪಖಂಡದ ಆಲ್ ಖೈದಾ ಸಂಘಟನೆಯ ಪ್ರಮುಖ ಸದಸ್ಯ ಅಬು ಮುಹ್ಸೆನ್ ಮಸ್ರಿ ಹತ್ಯೆಗೀಡಾಗಿದ್ದಾನೆ ಎಂದು ಮಾಹಿತಿ ನೀಡಿದೆ.
ಈಜಿಪ್ಟ್ ಮೂಲದ ಮಸ್ರಿ ಭಾರತದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದನು ಮತ್ತು ಎಫ್‌ಬಿಐನ ವಾಂಟೆಡ್ ಲಿಸ್ಟ್‌ನಲ್ಲಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


