ಯುದ್ಧದ ಸಿದ್ಧತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಕ್ಸಿ-ಜಿನ್ ಪಿಂಗ್ ಸೂಚನೆ
ಆ ಹೈಲರ್ಟ್ ಆಗಿ ಇರುವಂತೆ ಹಾಗೂ ಯುದ್ಧದ ಸಿದ್ದತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಆ ರಾಷ್ಟ್ರದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.

ಬೀಜಿಂಗ್ : ಆ ಹೈಲರ್ಟ್ ಆಗಿ ಇರುವಂತೆ ಹಾಗೂ ಯುದ್ಧದ ಸಿದ್ದತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಆ ರಾಷ್ಟ್ರದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.
ಕಡಲ ತೀರದ ತೀರದ ಕಾರ್ಪ್ಸ್ ಕಮಾಂಡರ್ಸ್ ಜೊತೆಗಿನ ಸಂವಾದದ ವೇಳೆಯಲ್ಲಿ ಕ್ಸಿ- ಜಿನ್ ಪಿಂಗ್ ಈ ರೀತಿಯ ಹೇಳಿಕೆ ನೀಡಿದ್ದು, ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚು ವಾಸ್ತವಿಕ ಯುದ್ಧ ತರಬೇತಿಯನ್ನು ಕೈಗೊಳ್ಳಬೇಕು ಮತ್ತು ಯುದ್ಧ ಸಿದ್ಧಾಂತಗಳು, ತರಬೇತಿ ವಿಧಾನಗಳು ಮತ್ತು ಕಾರ್ಯ ಯೋಜನೆಗಳ ವಿಷಯದಲ್ಲಿ ಹೊಸತನವನ್ನು ಸಾಧಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಆದಾಗ್ಯೂ, ಕೆಲ ದಿನಗಳಿಂದಲೂ ಚೀನಾದೊಂದಿಗೆ ಗಡಿ ವಿವಾದ ಇರುವ ಭಾರತಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಬುಧವಾರ ಸಮುದ್ರ ತೀರದ- ಮರೀನ್ ಕಾರ್ಪ್ಸ್ ಕೇಂದ್ರ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಕ್ಸಿ- ಜಿನ್ ಪಿಂಗ್, ಚೀನಾದ ಸಾಗರೋತ್ತರ ಹಿತಾಸಕ್ತಿ ಮತ್ತು ಕಡಲ ತೀರದ ಮೇಲಿನ ಹಕ್ಕುಗಳು ಹಾಗೂ ದೇಶದ ಭದ್ರತೆ ಮತ್ತು ಏಕತೆಯನ್ನು ರಕ್ಷಿಸುವ ಮಹತ್ವದ ಹೊಣೆಗಾರಿಕೆ ಕಡಲ ತೀರದ ಸೇನೆಯ ಆದ್ಯತೆಯಾಗಬೇಕೆಂದು ಅವರು ಒತ್ತಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


