ಕೊರೋನಾಗೆ ಆಕ್ಸ್‌ಫರ್ಡ್ ಲಸಿಕೆ ಕೋವಿಶೀಲ್ಡ್ ಶೇ.70ರಷ್ಟು ಪರಿಣಾಮಕಾರಿ!
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಕೋವಿಶೀಲ್ಡ್ ಎರಡು ಪ್ರಯೋಗಗಳಲ್ಲಿ ಶೇಕಡ 70 ಪರಿಣಾಮಕಾರಿ ಎಂದು ಸಾಬೀತಾಗಿದೆ ಸ್ವೀಡಿಷ್-ಬ್ರಿಟಿಷ್ ಬಯೋಟೆಕ್ ಸಂಸ್ಥೆ ಅಸ್ಟ್ರಾಜೆನೆಕಾ ಸೋಮವಾರ ಪ್ರಕಟಿಸಿದೆ.

ನವದೆಹಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದೊಂದಿಗೆ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಕೋವಿಶೀಲ್ಡ್ ಎರಡು ಪ್ರಯೋಗಗಳಲ್ಲಿ ಶೇಕಡ 70 ಪರಿಣಾಮಕಾರಿ ಎಂದು ಸಾಬೀತಾಗಿದೆ ಸ್ವೀಡಿಷ್-ಬ್ರಿಟಿಷ್ ಬಯೋಟೆಕ್ ಸಂಸ್ಥೆ ಅಸ್ಟ್ರಾಜೆನೆಕಾ ಸೋಮವಾರ ಪ್ರಕಟಿಸಿದೆ.
ಕಂಪನಿಯು ಹಂಚಿಕೊಂಡ ವಿವರಗಳ ಪ್ರಕಾರ, ಒಟ್ಟು 131 ಕೋವಿಡ್ -19 ಕೊರೋನಾ ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಿದ್ದು ಅವರಲ್ಲಿ ಯಾವುದಕ್ಕೂ ಗಂಭೀರವಾದ ಕಾಯಿಲೆ ಅಥವಾ ಆಸ್ಪತ್ರೆಯ ಅಗತ್ಯ ಕಾಣಿಸಲಿಲ್ಲ. ಜೊತೆಗೆ ಯಾವುದೇ ರೀತಿಯ ದುಷ್ಪರಿಣಾಮ ಬೀರಿಲ್ಲ ಎಂದು ತಿಳಿಸಿದೆ.
ಈ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂಗ್ರಹಿಸಬಹುದಾಗಿದೆ. ಅಡೆನೊವೈರಸ್ನಿಂದ ಅಭಿವೃದ್ಧಿಪಡಿಸಿದ ಲಸಿಕೆ ಜೊತೆ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದನಾ ಪಾಲುದಾರನಾಗಿದ್ದು ಕೋವಿಶೀಲ್ಡ್ ಭಾರತದಲ್ಲಿ ಲಭಿಸುವ ಮೊದಲ ಕೋವಿಡ್ -19 ಲಸಿಕೆಯಾಗುವ ಸಾಧ್ಯತೆಯಿದೆ.
"ಈ ಲಸಿಕೆ ಪರಿಣಾಮಕಾರಿ ಮತ್ತು ಸುರಕ್ಷತೆಯು ದೃಷ್ಟಿಯಿಂದ ಕೋವಿಡ್ -19 ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಲಿದೆ. ಈ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಕಂಪನಿಯ ಸಿಇಒ ಪ್ಯಾಸ್ಕಲ್ ಸೊರಿಯೊಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


