ಮ್ಯಾನ್ಮಾರ್ ಚುನಾವಣೆಯಲ್ಲಿ ಸಾಧಿಸಿದ ಸೂಕಿ ಪಕ್ಷಕ್ಕೆ ಭರ್ಜರಿ ಗೆಲುವು!
ಮ್ಯಾನ್ಮಾರ್ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಆಡಳಿತ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ ಎಂದು ಅಧಿಕೃತ ಫಲಿತಾಂಶಗಳಿಂದ ಹೊರಬಿದ್ದಿವೆ.

ಯಾಂಗೊನ್: ಮ್ಯಾನ್ಮಾರ್ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಆಡಳಿತ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ ಎಂದು ಅಧಿಕೃತ ಫಲಿತಾಂಶಗಳಿಂದ ಹೊರಬಿದ್ದಿವೆ.
ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ(ಎನ್‌ಎಲ್‌ಡಿ) ಈಗಾಗಲೇ ವಿಜಯವನ್ನು ಘೋಷಿಸಿದೆ. ಇದರೊಂದಿಗೆ ಬೆಂಬಲಿಗರು ಬೀದಿಗಿಳಿದು ಸಂಭ್ರಮಿಸಿದ್ದಾರೆ.
ಆದರೆ ಕಳೆದ ಐದು ದಿನಗಳಿಂದ ಫಲಿತಾಂಶ ಹೊರಬರುತ್ತಿದ್ದು ಇಂದು ಸಂಜೆ ಅಧಿಕೃತ ಫಲಿತಾಂಶ ಘೋಷಣೆಯಾಗಿದೆ. 2011ರಲ್ಲಿ ರಾಷ್ಟ್ರವು ಸಂಪೂರ್ಣ ಮಿಲಿಟರಿ ಆಡಳಿತದಿಂದ ಹೊರಹೊಮ್ಮಿದ ನಂತರದ ಇದು ಎರಡನೆಯ ಮತದಾನವಾಗಿದೆ.
ಶುಕ್ರವಾರ ಸಂಜೆ ಚುನಾವಣಾ ಆಯೋಗವು ಪ್ರಕಟಿಸಿದ ಫಲಿತಾಂಶಗಳು ಎನ್‌ಎಲ್‌ಡಿ 396 ಸ್ಥಾನಗಳನ್ನು ಗೆದ್ದಿದೆ. ಸಂಸತ್ತಿನ 60 ಪ್ರತಿಶತಕ್ಕಿಂತಲೂ ಹೆಚ್ಚು ಸ್ಥಾನಗಳು, ಸಂವಿಧಾನದಡಿಯಲ್ಲಿ ಮಿಲಿಟರಿಗೆ ಮೀಸಲಾಗಿರುವ ಕಾಲು ಭಾಗಗಳನ್ನೂ ಸಹ ಗಣನೆಗೆ ತೆಗೆದುಕೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಜನಾಂಗೀಯ ಸಂಘರ್ಷಕ್ಕೆ ಸೂಕಿ ಸರ್ಕಾರ ಬ್ರೇಕ್ ಹಾಕಿತ್ತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತ್ತು. ಇದು ಈ ಚುನಾವಣೆಯಲ್ಲಿ ಅವರ ಗೆಲುವಿಗೆ ನೆರವಾಯಿತು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


