ಬಹರೇನ್ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ನೇಮಕ
ಬಹರೇನ್ ದೇಶವನ್ನು ಸುಮಾರು ಐದು ದಶಕಗಳ ಕಾಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ಅವರು ಬುಧವಾರ ಅನಾರೋಗ್ಯದಿಂದಾಗಿ ನಿಧನರಾದರು.

ಮನಾಮಾ: ಬಹರೇನ್ ದೇಶವನ್ನು ಸುಮಾರು ಐದು ದಶಕಗಳ ಕಾಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ಅವರು ಬುಧವಾರ ಅನಾರೋಗ್ಯದಿಂದಾಗಿ ನಿಧನರಾದರು. ಈಗ ಬಹರೇನ್ ಹೊಸ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ಬಹರೇನ್ ರಾಜ ಹಮದ್ ಬಿನ್ ಖಲೀಫಾ ಆದೇಶ ಹೊರಡಿಸಿದ್ದಾರೆ. ಅಧಿಕೃತ ಗೆಜೆಟ್ ಪ್ರಕಟಗೊಂಡ ಕೂಡಲೇ ರಾಯಲ್ ಆದೇಶ ಜಾರಿಗೆ ಬರಲಿದೆ. ನಂತರ ಫ್ರಿನ್ಸ್ ಸಲ್ಮಾನ್ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಪ್ರಿನ್ಸ್ ಸಲ್ಮಾನ್ ಪ್ರಸ್ತುತ ಡೆಪ್ಯೂಟಿ ಕಮಾಂಡರ್ ಆಗಿದ್ದು, ಈಗ ಬಹರೇನ್ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ.
1970 ರಿಂದ ಬಹರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ವಿಶ್ವದಲ್ಲೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


