ಪ್ಯಾರಿಸ್ ಒಪ್ಪಂದದಿಂದ ಅಧಿಕೃತವಾಗಿ ಹೊರ ಬಂದ ಅಮೆರಿಕ
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಬುಧವಾರ ಪ್ರಕಟಗೊಳ್ಳುತ್ತಿವೆ. ಅಮೆರಿಕಾ ಪ್ಯಾರಿಸ್ ಒಪ್ಪಂದದಿಂದ ಇಂದು ಅಧಿಕೃತವಾಗಿ ಹೊರ ಬಂದಿದೆ.

ನ್ಯೂಯಾರ್ಕ್: ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಬುಧವಾರ ಪ್ರಕಟಗೊಳ್ಳುತ್ತಿವೆ. ಅಮೆರಿಕಾ ಪ್ಯಾರಿಸ್ ಒಪ್ಪಂದದಿಂದ ಇಂದು ಅಧಿಕೃತವಾಗಿ ಹೊರ ಬಂದಿದೆ.
ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ತೆಗೆದುಕೊಂಡ ಅತ್ಯಂತ ವಿವಾದಾತ್ಮಕ ನಿರ್ಧಾರಗಳ ಪೈಕಿ ಇದು ಒಂದು. ಈ ನಿರ್ಣಯವನ್ನು 2017 ರಲ್ಲಿ ತೆಗೆದುಕೊಳ್ಳಲಾಗಿತ್ತಾದರೂ ಅದು ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಮತ್ತೆ ಅಮೆರಿಕಾ ಬಯಸಿದರೆ ಒಪ್ಪಂದದಲ್ಲಿ ಸೇರಬಹುದಾಗಿದೆ.
ಪ್ಯಾರಿಸ್ ಒಪ್ಪಂದಕ್ಕೆ 2015 ರಲ್ಲಿ ಸಹಿ ಹಾಕಲಾಗಿತ್ತು. ಹವಾಮಾನದಲ್ಲಿ ಉಂಟಾಗುವ ದೊಡ್ಡ ಬದಲಾವಣೆಗಳನ್ನು ನಿರ್ಬಂಧಿಸಿ ಪರಿಸರ ಮಾಲಿನ್ಯ ತಡೆಗಟ್ಟುವುದು ಒಪ್ಪಂದದ ಪ್ರಮುಖ ಉದ್ದೇಶವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಜಾಗತಿಕ ತಾಪಮಾನವನ್ನು 2 ಸೆಂಟಿಗ್ರೇಡ್ ಕಡಿಮೆ ಮಾಡುವುದು ಈ ಒಪ್ಪದಗ ಗುರಿಯಾಗಿದೆ.
ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಒಪ್ಪಂದದಿಂದ ದೂರ ಸರಿಯಲು ನಿರ್ಧರಿಸಿದ್ದರು. 2017 ರಲ್ಲಿ ಈ ಸಂಬಂಧ ಘೋಷಣೆ ಹೊರಡಿಸಿದ್ದರು. ಆದರೆ, ಒಪ್ಪಂದದಲ್ಲಿನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅಮೆರಿಕಾ ಹೊರಬರಲು ಮೂರು ವರ್ಷ ತೆಗೆದುಕೊಂಡಿತು. ಭವಿಷ್ಯದಲ್ಲಿ, ಅಮೆರಿಕಾದಂತಹ ದೇಶಗಳು ಏಕ ಕಾಲದಲ್ಲಿ ಒಪ್ಪಂದದಿಂದ ದೂರ ಸರಿದರೆ ಕಷ್ಟವಾಗಬಹುದು ಎಂಬ ಕಾರಣದಿಂದ, ಒಪ್ಪಂದದಿಂದ ಯಾವುದೇ ದೇಶ ದೂರಸರಿಯಬೇಕಾದರೆ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟ ಸಮಯ ತೆಗೆದುಕೊಳ್ಳುವಂತೆ ನಿಯಮಗಳನ್ನು ರೂಪಿಸಲಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಪ್ರಕಟಗೊಳ್ಳುತ್ತಿರುವ ದಿನದಂದೇ ಅಮೆರಿಕಾ ಪ್ಯಾರೀಸ್ ಒಪ್ಪಂದದಿಂದ ಅಧಿಕೃತವಾಗಿ ಹೊರಬಿದ್ದಿರುವುದು ಕಾಕತಾಳೀಯವಂತೂ ಅಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


