ವಿದೇಶ

ಟ್ರಂಪ್‌ಗೆ ಕೈಕೊಟ್ಟ 'ಭವಿಷ್ಯ': ರಷ್ಯಾದ ಝೂನಲ್ಲಿ ನಡೆದದ್ದೇನು? ಈ ವಿಡಿಯೋ ನೋಡಿ!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಜೋ ಬಿಡೆನ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕೆಲ ಅಂಕಿಅಂಶಗಳ ಪ್ರಕಾರ ಬಿಡೆನ್ ಟ್ರಂಪ್ ರನ್ನು ಹಿಂದಿಕ್ಕಿದ್ದಾರೆ ಎಂದು ವರದಿಯಾಗಿವೆ.

ಟ್ರಂಪ್‌ಗೆ ಕೈಕೊಟ್ಟ 'ಭವಿಷ್ಯ': ರಷ್ಯಾದ ಝೂನಲ್ಲಿ ನಡೆದದ್ದೇನು? ಈ ವಿಡಿಯೋ ನೋಡಿ!
ಸಂಗ್ರಹ ಚಿತ್ರ
Published On :

ವಾಷ್ಟಿಂಗನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಜೋ ಬಿಡೆನ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಕೆಲ ಅಂಕಿಅಂಶಗಳ ಪ್ರಕಾರ ಬಿಡೆನ್ ಟ್ರಂಪ್ ರನ್ನು ಹಿಂದಿಕ್ಕಿದ್ದಾರೆ ಎಂದು ವರದಿಯಾಗಿವೆ. 

ಇದರ ಅರ್ಥ ಪ್ರಸಕ್ತ ಚುನಾವಣೆಯಲ್ಲಿ ಟ್ರಂಪ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಚುನಾವಣೆಗಳು ನಡೆದರೆ ಇಲ್ಲಿನ ಅಭ್ಯರ್ಥಿಗಳು ಜ್ಯೋತಿಷ್ಯದ ಮೊರೆ ಹೋಗುತ್ತಾರೆ. ಆದರೆ ವಿದೇಶಗಳಲ್ಲಿ ಪ್ರಾಣಿಗಳ ಭವಿಷ್ಯ ಹೆಚ್ಚು ಪ್ರಸಿದ್ಧಿಯಲ್ಲಿದೆ. 

ರಷ್ಯಾದ ಝೂನಲ್ಲಿ ಎರಡು ಹುಲಿ ಮತ್ತು ಕರಡಿ ಮೂಲಕ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಭವಿಷ್ಯ ತಿಳಿಯಲಾಯಿತು. ಆ ಪ್ರಕಾರ ಒಂದು ಹುಲಿ, ಕರಡಿ ಜೋ ಬಿಡೆನ್ ಅವರನ್ನು ಗುರುತಿಸಿದರೆ, ಒಂದು ಹುಲಿ ಮಾತ್ರ ಟ್ರಂಪ್ ಅವರನ್ನು ಗುರುತಿಸಿದೆ. 

ಸದ್ಯದ ವರದಿ ಪ್ರಕಾರ, ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ 238 ಸ್ಥಾನ ಗಳಿಸಿದ್ದರೆ ಟ್ರಂಪ್ 213 ಸ್ಥಾನ ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.