ದಕ್ಷಿಣ ಫಿಲಿಪೈನ್ಸ್ ನಲ್ಲಿ ಸರ್ಕಾರಿ ಪಡೆಗಳಿಂದ 7 ಉಗ್ರರ ಹತ್ಯೆ
ದಕ್ಷಿಣ ಫಿಲಿಪೈನ್ಸ್ ನ ಸುಲು ಪ್ರಾಂತ್ಯದ ದ್ವೀಪವೊಂದರ ಬಳಿ ಸರ್ಕಾರಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಅಬು ಸಯ್ಯಫ್ ಗುಂಪಿನ ಏಳು ಶಂಕಿತ ಉಗ್ರರು ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

ಮನಿಲಾ: ದಕ್ಷಿಣ ಫಿಲಿಪೈನ್ಸ್ ನ ಸುಲು ಪ್ರಾಂತ್ಯದ ದ್ವೀಪವೊಂದರ ಬಳಿ ಸರ್ಕಾರಿ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಅಬು ಸಯ್ಯಫ್ ಗುಂಪಿನ ಏಳು ಶಂಕಿತ ಉಗ್ರರು ಮಂಗಳವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.
ಸ್ಥಳೀಯ ಕಾಲವಮಾನ ಮುಂಜಾನೆ 2 ಗಂಟೆಗೆ ಸುಲುವಿನ ಪರಂಗ್ ಪಟ್ಟಣದ ಸುಲಾರೆ ದ್ವೀಪದ ಬಳಿ ವೇಗದ ದೋಣಿಯಲ್ಲಿ ಸಾಗುತ್ತಿದ್ದ ಭಯೋತ್ಪಾದಕರ ತಂಡವನ್ನು ಗಸ್ತು ತಿರುಗುತ್ತಿದ್ದ ಪಡೆಗಳು ಪಡೆಗಳು ತಡೆದಿವೆ ಎಂದು ವೆಸ್ಟರ್ನ್ ಮಿಂಡಾನಾವೊ ಕಮಾಂಡ್‌ನ ಕಮಾಂಡರ್ ಕಾರ್ಲೆಟೊ ವಿನ್ಲುವಾನ್ ತಿಳಿಸಿದ್ದಾರೆ.
ಮುಖ್ಯ ಭೂಭಾಗವಾ ಮಿಂಡಾನಾವೊ ಪ್ರದೇಶದಲ್ಲಿ ಅಪಹರಣ ಚಟುವಟಿಕೆ ನಡೆಸಲು ಭಯೋತ್ಪಾದಕ ಗುಂಪು ಯೋಜನೆ ರೂಪಿಸಿದ್ದರ ಬಗ್ಗೆ ಮಾಹಿತಿ ಪಡೆದ ನಂತರ ಸೈನಿಕರು ಈ ದಾಳಿಯನ್ನು ಆರಂಭಿಸಿದ್ದರು. ಗುಂಡಿನ ಚಕಮಕಿ 25 ನಿಮಿಷಗಳ ಕಾಲ ನಡೆದಿದೆ. ಎಲೈಟ್ ಸ್ಕೌಟ್ ರೇಂಜರ್ಸ್ ಮತ್ತು ವಿಶೇಷ ಪಡೆಗಳ ಸೈನಿಕರು ಭಯೋತ್ಪಾದಕರ ವಿರುದ್ಧದ ದಾಳಿಗೆ ಹೆಲಿಕಾಪ್ಟರ್ ಬಳಸಿದ್ದಾರೆ ಎಂದು ಅವರು ಹೇಳಿದ್ದಾರೆ. ನೌಕಾಪಡೆ ಮತ್ತು ವಾಯಪಡೆಗಳನ್ನು ಬಳಸಿಕೊಂಡು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


