ವಿದೇಶ

ಬಲಿಷ್ಠ, ಶ್ರೀಮಂತ ಭಾರತ ಚೀನಾದ ಬಲಿಷ್ಠ ಮಹತ್ವಾಕಾಂಕ್ಷೆಗಳನ್ನು ನಿರಾಶೆಗೊಳಿಸಬಲ್ಲದು: ಅಮೆರಿಕ ಸೆನೆಟರ್

ಅಮೆರಿಕ-ಚೀನಾ ಶೀಥಲ ಸಮರದಲ್ಲಿ ತೊಡಗಿದ್ದು, ಚೀನಾವನ್ನು ಮಣಿಸಲು ಅಮೆರಿಕ ಭಾರತವನ್ನು ದಾಳವನ್ನಾಗಿ ಉಪಯೋಗಿಸಿಕೊಳ್ಳಲು ಯತ್ನಿಸುತ್ತಿದೆ. ಇದರ ಭಾಗವಾಗಿ ಅಮೆರಿಕದ ಟೆಕ್ಸಾಸ್ ನ ಸೆನೆಟರ್ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಲೇಖನ ಬರೆದಿದ್ದು, ಚೀನಾವನ್ನು ಮಣಿಸಲು ಅಮೆರಿಕ ಭಾರತವನ್ನು ಮೇಲೆತ್ತಬೇಕು ಎಂದು ಹೇಳಿದ್ದಾರೆ.

ಬಲಿಷ್ಠ, ಶ್ರೀಮಂತ ಭಾರತ ಚೀನಾದ ಬಲಿಷ್ಠ ಮಹತ್ವಾಕಾಂಕ್ಷೆಗಳನ್ನು ನಿರಾಶೆಗೊಳಿಸಬಲ್ಲದು: ಅಮೆರಿಕ ಸೆನೆಟರ್
ಶ್ರೀಮಂತ, ಶ್ರೀಮಂತ ಭಾರತ ಚೀನಾದ ಬಲಿಷ್ಠ ಮಹತ್ವಾಕಾಂಕ್ಷೆಗಳನ್ನು ನಿರಾಶೆಗೊಳಿಸಬಲ್ಲದು: ಅಮೆರಿಕ ಸೆನೆಟರ್
Published On :

ವಾಷಿಂಗ್ ಟನ್: ಅಮೆರಿಕ-ಚೀನಾ ಶೀಥಲ ಸಮರದಲ್ಲಿ ತೊಡಗಿದ್ದು, ಚೀನಾವನ್ನು ಮಣಿಸಲು ಅಮೆರಿಕ ಭಾರತವನ್ನು ದಾಳವನ್ನಾಗಿ ಉಪಯೋಗಿಸಿಕೊಳ್ಳಲು ಯತ್ನಿಸುತ್ತಿದೆ. ಇದರ ಭಾಗವಾಗಿ ಅಮೆರಿಕದ ಟೆಕ್ಸಾಸ್ ನ ಸೆನೆಟರ್ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಲೇಖನ ಬರೆದಿದ್ದು, ಚೀನಾವನ್ನು ಮಣಿಸಲು ಅಮೆರಿಕ ಭಾರತವನ್ನು ಮೇಲೆತ್ತಬೇಕು ಎಂದು ಹೇಳಿದ್ದಾರೆ.

ಚೀನಾದ ಆಧಿಪತ್ಯದ ಮಹತ್ವಾಕಾಂಕ್ಷೆಗಳನ್ನು ಭಗ್ನಗೊಳಿಸುವುದಕ್ಕೆ ಶ್ರೀಮಂತ, ಶಕ್ತಿವಂತ, ಪ್ರಜಾಸತ್ತೀಯ ಭಾರತಕ್ಕೆ ಮಾತ್ರ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತದ ಬೆಳವಣಿಗೆ ದರವನ್ನು ದೀರ್ಘಾವಧಿಯಲ್ಲಿ ಮೆಲೆತ್ತುವುದು ಅಮೆರಿಕದ ಆದ್ಯತೆಯ ವಿದೇಶಾಂಗ ನೀತಿಯ ಗುರಿಯಾಗಿರಬೇಕೆಂದು ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್ ಅಭಿಪ್ರಾಯಪಟ್ಟಿದ್ದಾರೆ. 

ಕೊರೋನಾ ಸೋಂಕು, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಉಪದ್ರವ, ಹಾಂಕ್ ಕಾಂಗ್ ನಲ್ಲಿ ಚೀನಾದ ದಬ್ಬಾಳಿಕೆ ಮುಂತಾದ ವಿಷಯಗಳಲ್ಲಿ ಅಮೆರಿಕ-ಶೀತಲ ಸಮರ ನಡೆಯುತ್ತಿದೆ.

ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟವಾಗಿರುವ ತಮ್ಮ ಲೇಖನವನ್ನು ಹಂಚಿಕೊಂಡಿರುವ ಸೆನೆಟರ್ ಜಾನ್ ಕಾರ್ನಿನ್, ಟ್ವೀಟ್ ಮಾಡಿದ್ದು ಅಮೆರಿಕ ತನಗೆ ಅತ್ಯಂತ ಮುಖ್ಯವಾಗಿದ್ದ ಶೀತಲ ಸಮರಗಳ ಗೆಲುವುಗಳನ್ನು ಸಾಧಿಸಿರುವುದು ಪ್ರಜಾಪ್ರಭುತ್ವ ದೇಶಗಳಿಗೆ  ಶ್ರ‍ೀಮಂತವಾಗಲು ಸಹಾಯ ಮಾಡುವುದರಿಂದ, ಈಗ ಭಾರತಕ್ಕೆ ದೀರ್ಘಾವಧಿಯ ಬೆಳವಣಿಗೆ ದರ ಮೇಲೆತ್ತುವುದಕ್ಕೆ ಸಹಾಯ ಮಾಡುವುದು ಅಮೆರಿಕದ ಆದ್ಯತೆಯ ವಿದೇಶಾಂಗ ನೀತಿಯಾಗಿರಬೇಕೆಂದು ಹೇಳಿದ್ದಾರೆ. 

ಇನ್ನು ಅಮೆರಿಕದ ತಜ್ಞರು ಸಹ ಭಾರತ ಅಮೆರಿಕದ ಸ್ವಾಭಾವಿಕ ಮಿತ್ರ ರಾಷ್ಟ್ರವಾಗಿದ್ದು, ಹೊಸದಾಗಿ ಚೀನಾದ ಜೊತೆ ಶೀತಲ ಸಮರ ಎದುರಿಸುವ ರಾಷ್ಟ್ರವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.