ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ: ಶ್ವೇತ ಭವನದಲ್ಲಿ ಇದು ಎರಡನೇ ಕೇಸು!
ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ಮಾಧ್ಯಮ ಕಾರ್ಯದರ್ಶಿಗೆ ಕೊರೋನಾ ವೈರಸ್ ತಗಲಿದೆ. ಶ್ವೇತಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಳೆದೊಂದು ವಾರದಲ್ಲಿ ಕೊರೋನಾ ಸೋಂಕು ತಗಲಿಸಿಕೊಂಡಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ.
ಮೈಕ್ ಪೆನ್ಸ್ ಅವರ ಸಹವರ್ತಿ ಯಾರು ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಶ್ವೇತಭವನದಲ್ಲಿ ಕೊರೋನಾ ಹರಡುತ್ತಿರುವುದು ತಮಗೆ ಆತಂಕ ತಂದಿಲ್ಲ ಎಂದಿದ್ದಾರೆ.
ಶ್ವೇತಭವನದ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.ನಿನ್ನೆ ಕೊರೋನಾ ಸೋಂಕು ಪತ್ತೆಯಾದ ಮೈಕ್ ಪೆನ್ಸ್ ಅವರ ಮಾಧ್ಯಮ ವಕ್ತಾರೆ ಕೇಟೀ ಮಿಲ್ಲರ್ ಇತ್ತೀಚೆಗೆ ಮೈಕ್ ಪೆನ್ಸ್ ಅವರೊಂದಿಗೆ ಸಂಪರ್ಕ ಹೊಂದಿದ್ದರು. ಆದರೆ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿರಲಿಲ್ಲ.
ಟ್ರಂಪ್ ಅವರಿಗೆ ಉನ್ನತ ಮಟ್ಟದ ಸಲಹೆಗಾರರಾಗಿರುವ ಸ್ಟೆಫನ್ ಮಿಲ್ಲರ್ ಅವರ ಪತ್ನಿಯಾಗಿರುವ ಕೇಟೀ, ಈ ಸಂದರ್ಭದಲ್ಲಿ ಸ್ಟೆಫನ್ ಅವರಿಗೆ ಕೂಡ ಕೊರೋನಾ ಸೋಂಕು ತಗಲಿದೆಯೇ, ಅವರು ಕೂಡ ಶ್ವೇತಭವನದಲ್ಲಿ ಕೆಲಸ ಮಾಡುತ್ತಿದ್ದರೇ ಎಂಬ ಬಗ್ಗೆ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


