ವಿದೇಶ

ಎರಡನೇ ಪತ್ನಿ ಮರಿನಾಗೆ ವಿಚ್ಛೇದನ ನೀಡಿದ ಬ್ರಿಟನ್ ಪ್ರಧಾನಿ ಬೋರಿಸ್

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಅವರು ಕೊನೆಗೂ ತಮ್ಮ ಎರಡನೇ ಪತ್ನಿ ಮರಿನಾ ವೀಲರ್ ಅವರಿಗೆ ಅಧಿಕೃತವಾಗಿ ವಿಚ್ಛೇದನ ನೀಡಿದ್ದಾರೆ.

ಎರಡನೇ ಪತ್ನಿ ಮರಿನಾಗೆ ವಿಚ್ಛೇದನ ನೀಡಿದ ಬ್ರಿಟನ್ ಪ್ರಧಾನಿ ಬೋರಿಸ್
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
Published On :

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಅವರು ಕೊನೆಗೂ ತಮ್ಮ ಎರಡನೇ ಪತ್ನಿ ಮರಿನಾ ವೀಲರ್ ಅವರಿಗೆ ಅಧಿಕೃತವಾಗಿ ವಿಚ್ಛೇದನ ನೀಡಿದ್ದಾರೆ. 

ಕಳೆದ ಫೆಬ್ರವರಿಯಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ವೀಲರ್ ಅವರಿಗೆ ಈಗ ಬೋರಿಸ್ ಅವರಿಂದ ಅಧಿಕೃತವಾಗಿ ಬಿಡುಗಡೆ ಸಿಕ್ಕಿದೆ.

ಬೋರಿಸ್ ಅವರು ಇತ್ತೀಚಿಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ತಮ್ಮ ಗೆಳತಿ ಕ್ಯಾರಿ ಸಿಮಂಡ್ಸ್ ಅವರೊಂದಿಗೆ ಮೂರನೇ ಮದುವೆಯಾಗಲಿದ್ದಾರೆ.

ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದ ಬೋರಿಸ್ ಜಾನ್ಸನ್ ಅವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಏ.27 ರಿಂದ ಕಚೇರಿಗೆ ಆಗಮಿಸಲು ಪ್ರಾರಂಭಿಸಿದ್ದರು. 

ಪ್ರಧಾನಿ ಬೋರಿಸ್ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತ ಬೋರ್ಸ್ ಅವರ ಮೂರನೇ ಪತ್ನಿಯಾಗಲಿರುವ ಸಿಮಂಡ್ಸ್ ಅವರಿಗೆ ಗಂಡು ಮಗು ಜನಿಸಿದೆ.

ಬೋರಿಸ್ ಅವರ ಎರಡನೇ ಪತ್ನಿ ವೀಲರ್ ಗೆ ನಾಲ್ವರು ಮಕ್ಕಳಿದ್ದಾರೆ. ಎರಡನೇ ಪತ್ನಿಯಿಂದ ಜಾನ್ಸನ್ ವಿಚ್ಛೇದನ ಪಡೆದಿದ್ದಾರೆ. ವಿವಾಹೇತರ ಸಂಬಂಧದಲ್ಲಿ ಜಾನ್ಸನ್ ಗೆ ಮತ್ತೊಂದು ಮಗು ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.