ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ 85 ಸಾವು: ದೇಶವಾಸಿಗಳು ಮನೆಯಲ್ಲಿಯೇ ಇರಿ- ಮೆಲಾನಿಯಾ ಟ್ರಂಪ್
ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ನಿಂದಾಗಿ ಅಮೆರಿಕಾದಲ್ಲಿ 85 ಜನರು ಸಾವನ್ನಪ್ಪಿದ್ದು, ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವಾಸಿಗಳು ಮನೆಯಲ್ಲಿಯೇ ಇರುವಂತೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.

ವಾಷಿಂಗ್ಟನ್: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ನಿಂದಾಗಿ ಅಮೆರಿಕಾದಲ್ಲಿ 85 ಜನರು ಸಾವನ್ನಪ್ಪಿದ್ದು, ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವಾಸಿಗಳು ಮನೆಯಲ್ಲಿಯೇ ಇರುವಂತೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.
ಇಮೇಲ್ ಅಥವಾ ಫೇಸ್‌ಟೈಮ್ ಮೂಲಕ ನಿಮ್ಮ ಪ್ರೀತಿಪಾತ್ರರೊಡನೆ ಸಂಪರ್ಕ ಸಾಧಿಸಲು ಮನೆಯಿಂದಲೇ ಕೆಲಸ ಮಾಡುವ ಸಮಯದ ಲಾಭವನ್ನು ಪಡೆದುಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ, ಅಥವಾ ಪುಸ್ತಕವನ್ನು ಓದುವ ಮೂಲಕ ಅಥವಾ ಹವ್ಯಾಸದಲ್ಲಿ ಸಮಯ ಕಳೆಯುವ ಮೂಲಕ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಿ ಎಂದು ಮೆಲಾನಿಯಾ ಟ್ರಂಪ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
85 ಜನರು ಸಾವನ್ನಪ್ಪಿರುವುದು ಮಾತ್ರವಲ್ಲದೇ, ಸುಮಾರು 4500 ಅಮೆರಿಕಾದ ಜನರು ಕೊರೋನಾವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಸಾಮೂಹಿಕವಾಗಿ ಸೇರುವುದು, 10ಕ್ಕೂ ಹೆಚ್ಚು ಜನರು ಗುಂಪು ಸೇರುವುದನ್ನು ತಡೆಗಟ್ಟಿ ಎಂದು ಶ್ವೇತಭವನ ಸಲಹೆ ನೀಡಿದೆ.
ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೊರೋನಾವೈರಸ್ 7100 ಜನರನ್ನು ಬಲಿಪಡೆದುಕೊಂಡಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ವಾರದ ಆರಂಭದಿಂದಲೂ ಸಾವಿರಾರು ಅಮೆರಿಕದವರು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕೆಲಸದ ಮಧ್ಯೆಯೂ ಪ್ರತ್ಯೇಕವಾಗಿರುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.
ಅಮೆರಿಕಾದಲ್ಲಿಯೂ ಶಾಲಾ, ಕಾಲೇಜುಗಳು, ಹೋಟೆಲ್, ರೆಸ್ಟೋರೆಂಟ್ ಗಳು ಮುಚ್ಚಲ್ಪಟ್ಟಿದ್ದು, ಕ್ರೀಡಾ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


