ಕೊರೋನಾ ಸಮಸ್ಯೆಯೇ ಮುಗಿದಿಲ್ಲ, ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ಸಾಮರ್ಥ್ಯದ ಸ್ವೈನ್ ಫ್ಲೂ ಜಿ4 ವೈರಸ್ ಪತ್ತೆ!
ಜಗತ್ತಿನ 213 ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ ಆದಾಗಲೇ ಕೋವಿಡ್-19 ವೈರಸ್ ತವರು ಚೀನಾದಲ್ಲಿ ಮತ್ತೊಂದು ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದೆ.

ವಾಷಿಂಗ್ಟನ್: ಜಗತ್ತಿನ 213 ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ ಆದಾಗಲೇ ಕೋವಿಡ್-19 ವೈರಸ್ ತವರು ಚೀನಾದಲ್ಲಿ ಮತ್ತೊಂದು ವೈರಸ್ ಸಾಂಕ್ರಾಮಿಕ ಕಾಣಿಸಿಕೊಂಡಿದೆ.
ಹೌದು... ಚೀನಾದಲ್ಲಿರುವ ಸಂಶೋಧಕರು ಚೀನಾದಲ್ಲಿ ಸಾಂಕ್ರಾಮಿಕವಾಗಿ ಹರಡಬಲ್ಲ ಸಾಮರ್ಥ್ಯವಿರುವ ಸ್ವೈನ್ ಫ್ಲೂ (ಹಂದಿಜ್ವರ)ದ ವೈರಸ್ ಅನ್ನು ಪತ್ತೆ ಮಾಡಿದ್ದಾರೆ. ಚೀನಾದಲ್ಲಿರುವ ಹಂದಿಗಳಲ್ಲಿ ಈ ವೈರಸ್ ಕಾಣಿಸಿಕೊಂಡಿದ್ದು, ಈ ವೈರಸ್ ಮನುಷ್ಯರಿಗೂ ಅಂಟಿಕೊಳ್ಳುವ ಸಾಮರ್ಥ್ಯವಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡಿ ಸಾಂಕ್ರಾಮಿಕವಾಗುವ ಭೀತಿ ಇದೆ ಎಂದು ಚೀನಿ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾದ ಕೆಲ ಪ್ರಾಂತ್ಯಗಳಲ್ಲಿರುವ ಹಂದಿಗಳು ಇನ್‌ಫ್ಲುಯೆಂಜಾದಿಂದ ಹೆಚ್ಚು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ, ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜಿ-4 ಎಂಬ ಹೆಸರಿನ ವೈರಸ್ ಇದಾಗಿದ್ದು,ಚೀನಾದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್ ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿಯೂ ತಗಲುವ ಸಾಧ್ಯತೆ ಇದೆ.
ಈ ಬಗ್ಗೆ ಚೀನಾ ಅಗ್ರಿಕಲ್ಚರಲ್ ಯೂನಿವರ್ಸಿಟಿಯ (ಸಿಎಯು) ಲಿಯು ಜಿನ್ಹುವಾ ನೇತೃತ್ವದ ತಂಡವು ಚೀನಾದ 10 ಕಸಾಯಿಖಾನೆಗಳ 30 ಸಾವಿರಕ್ಕೂ ಅಧಿಕ ಹಂದಿಗಳ ಸ್ವ್ಯಾಬ್‌ಗಳ ಪರೀಕ್ಷೆ ಮಾಡಿದ್ದು, ಅವುಗಳ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ, ಇದರ ಅಧ್ಯಯನ ನಡೆಸಲಾಗಿತ್ತು. ಈದೀಗ ಈ ವೈರಸ್ ಕುರಿತಂತೆ ವಿಜ್ಞಾನಿಗಳು ಮಾಹಿತಿ ನೀಡಿದ್ದು, ಈ ವೈರಸ್ ನಿಯಂತ್ರಣಕ್ಕೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
ಇನ್ನು ಇದೇ ವೈರಸ್ ಕುರಿತಂತೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನವೂ ಕೂಡ ಜಿ 4 ಹೆಸರಿನ ವೈರಸ್‌ನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಇದು 2009ರಲ್ಲಿ ವಿಶ್ವದೆಲ್ಲೆಡೆ ಬೆಚ್ಚಿ ಬೀಳಿಸಿದ್ದ ಎಚ್1ಎನ್1ನ ಇನ್ನೊಂದು ರೂಪಾಂತರ ಎಂದು ಉಲ್ಲೇಖಿಸಿದೆ. ಮನುಷ್ಯರಿಗೆ ಸೋಂಕು ತಗುಲಿಸಬಹುದಾದ ಎಲ್ಲಾ ಲಕ್ಷಣಗಳನ್ನೂ ಈ ವೈರಸ್ ಹೊಂದಿದೆ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


