ನ್ಯೂಜೆರ್ಸಿ: ಮನೆಯಲ್ಲಿನ ಈಜುಕೊಳದಲ್ಲಿ ಮೂವರು ಭಾರತೀಯ ಮೂಲದ ಕುಟುಂಬ ಸದಸ್ಯರ ಶವ ಪತ್ತೆ
ಇತ್ತೀಚಿಗೆ ಖರೀದಿಸಿದ್ದ ಮನೆ ಹಿಂಭಾಗದ ಈಜುಕೊಳದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಮೂವರು ಭಾರತೀಯ ಮೂಲದ ಕುಟುಂಬ ಸದಸ್ಯರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ.

ನ್ಯೂಜೆರ್ಸಿ: ಇತ್ತೀಚಿಗೆ ಖರೀದಿಸಿದ್ದ ಮನೆ ಹಿಂಭಾಗದ ಈಜುಕೊಳದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಮೂವರು ಭಾರತೀಯ ಮೂಲದ ಕುಟುಂಬ ಸದಸ್ಯರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ.
ಭರತ್ ಪಟೇಲ್ (62), ಅವರ 33 ವರ್ಷದ ಸೊಸೆ ನಿಶಾ ಪಟೇಲ್ ಮತ್ತು ಅವರ 8 ವರ್ಷದ ಮಗಳು ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಸೋಮವಾರ ಈಸ್ಟ್ ಬ್ರನ್ಸ್‌ವಿಕ್‌ನ ಮನೆಯಲ್ಲಿನ ಈಜುಕೊಳದಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್, ನಿಶಾ ಮತ್ತು ಅವರ ಮಗಳು ವಿದ್ಯುದಾಘಾತವಾಗಿ ಈಜುಕೊಳದಲ್ಲಿ ಬಿದ್ದರೆ ಎನ್ನುವುದು ತನಿಖೆ ಮಾಡಲಾಗಿದ್ದು ಹಾಗೇನೂ ಸಂಭವಿಸಿಲ್ಲ ಎನ್ನುವುದು ಗೊತ್ತಾಗಿದೆ. ಮೂವರು ಕುಟುಂಬ ಸದಸ್ಯರು ಹೇಗೆ ಮುಳುಗಿದರು ಎಂಬುದನ್ನು ಇನ್ನಷ್ಟೇ ಕಂಡುಕೊಳ್ಲಬೇಕಿದೆ. ಅವರೆಲ್ಲಾ ಈಜು ಬಲ್ಲವರಾಗಿದ್ದರೆ ಅಥವಾ ನೀರಿನ ಆಳಕ್ಕೆ ಇಳಿದಾಗ ಭಯಪಟ್ಟು ಮುಳುಗಿದ್ದರೆ ಎನ್ನುವುದು ಗೊತ್ತಾಗಿಲ್ಲ.
ಸಾರ್ವಜನಿಕ ದಾಖಲೆಗಳ ಪ್ರಕಾರ, ಕುಟುಂಬವು ಏಪ್ರಿಲ್‌ನಲ್ಲಿ 451,000 ಡಾಲರ್‌ಗೆ ಈ ಮನೆಯನ್ನು ಖರೀದಿಸಿದೆ. ಸೋಮವಾರ ಹಿತ್ತಲಿನಿಂದ ಕಿರುಚಾಟ ಕೇಳಿದ್ದಾಗಿ ಪಕ್ಕದ ಮನೆಯವರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮೂವರನ್ನು ಬದುಕಿಸುವಂತೆ ನಿಶಾ ಅವರ ಅತ್ತೆ ಕೊಳದ ಮೇಲ್ದಂಡೆಯಲ್ಲಿ ನಿಂತು ಕಿರುಚಿದ್ದಿರಬೇಕು ಎಂದೂ ಅವರು ಅಂದಾಜಿಸಿದ್ದಾರೆ. ಇದು ಅಮೆರಿಕಾದಲ್ಲಿ ನೆಲೆಸಿದ ಭಾರತೀಯ ಸಮುದಾಯಕ್ಕೆ ಆಘಾತಕಾರಿ ದಿನ ಎಂದು ಪೋಲೀಸ್ ಮುಖ್ಯಸ್ಥ ಫ್ರಾಂಕ್ ಲ್ಯುನಾಕೋ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


