ಕೊರೋನಾ ವೈರಸ್ ಪ್ರಮಾಣ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಹೆಚ್ಚು: ವರದಿ
ಕೊರೋನಾ ವೈರಸ್ ಸೋಂಕಿನ ದುಷ್ಪರಿಣಾಮ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ ಎಂಬ ಸ್ಫೋಟಕ ಮಾಹಿತಿ ಅಧ್ಯಯನದಿಂದ ಹೊರ ಬಿದಿದ್ದೆ.

ವಾಷಿಂಗ್ಟನ್: ಕೊರೋನಾ ವೈರಸ್ ಸೋಂಕಿನ ದುಷ್ಪರಿಣಾಮ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ ಎಂಬ ಸ್ಫೋಟಕ ಮಾಹಿತಿ ಅಧ್ಯಯನದಿಂದ ಹೊರ ಬಿದಿದ್ದೆ.
ಮಾರಕ ಕೊರೋನಾ ವೈರಸ್ ಚೀನಾದಲ್ಲಿ ಕಾಣಿಸಿಕೊಂಡಾಗ ಮಕ್ಕಳ ಮೇಲೆ ಅದರ ಪರಿಣಾಮ ಕಡಿಮೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಿಡುಗಡೆಯಾಗಿರುವ ವೈಜ್ಞಾನಿಕ ಅಧ್ಯಯನದ ಅನ್ವಯ ಕೊರೋನಾ ವೈರಸ್ ಪ್ರಮಾಣ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಜಾಮಾ ಪೀಡಿಯಾಟ್ರಿಕ್ಸ್ ಎಂಬ ವೈಜ್ಞಾನಿಕ ಆರೋಗ್ಯ ಪತ್ರಿಕೆಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದ್ದು, ವರದಿಯಲ್ಲಿ ಕೊರೋನಾ ವೈರಸ್ ಸೋಂಕಿನ ದುಷ್ಪರಿಣಾಮ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ. ಮಕ್ಕಳಿಂದ ದೊಡ್ಡವರಿಗೂ ಸೋಂಕು ತಗುಲಿ ಅದರಿಂದ ಅವರ ಪ್ರಾಣಕ್ಕೆ ಎರವಾಗುತ್ತದೆ ಎಂದು ಹೇಳಿದೆ.
ಜಗತ್ತಿಗೆ ಕೊರೋನಾ ವೈರಸ್ ಪರಿಚಯವಾದಾಗ ಮಕ್ಕಳಲ್ಲಿ ಸೋಂಕಿನ ಬಗ್ಗೆ ಹೆಚ್ಚಿನ ದತ್ತಾಂಶ ದೊರೆತಿರಲಿಲ್ಲ. ಆದರೆ ಜಗತ್ತಿಗೆ ಮಾರಕ ಸೋಂಕು ತಗುಲಿದ ಬೆನ್ನಲ್ಲೇ ಜಗತ್ತಿನಾದ್ಯಂತ ಲಕ್ಷಾಂತರ ಮಕ್ಕಳೂ ಕೂಡ ಸೋಂಕಿಗೆ ತುತ್ತಾಗಿರುವ ಕುರಿತು ವರದಿಯಾಗಿದೆ. ಮಕ್ಕಳ ಮುಖಾಂತರ ವೈರಸ್ ಹಿರಿಯರಿಗೆ ಸುಲಭವಾಗಿ ಪ್ರಸರಣವಾಗುವ ಸಾಧ್ಯತೆ ಇದೆ.
ಲೂರಿ ಮಕ್ಕಳ ಆಸ್ಪತ್ರೆ ಮತ್ತು ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾಲಯದ ಆನ್ ಮತ್ತು ರಾಬರ್ಟ್ ಎಚ್ ಎಂಬ ತಜ್ಞರು ಈ ಬಗ್ಗೆ ಅಧ್ಯಯನ ನಡೆಸಿದ್ದು, ಮಾರ್ಚ್ 23ರಿಂದ ಏಪ್ರಿಲ್ 2ರವರೆಗೆ ಚಿಕಾಗೊ, ಇಲಿನಾಯ್ಸ್‌ನ ವಿವಿಧ ಆಸ್ಪತ್ರೆಗಳಲ್ಲಿನ ಒಳರೋಗಿ, ಹೊರರೋಗಿ, ತುರ್ತು ವಿಭಾಗ ಮತ್ತು ಡ್ರೈವ್-ಥ್ರೂ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ರೋಗಿಗಳ ದತ್ತಾಂಶ ಸಂಗ್ರಹಿಸಿದ್ದರು. ಈ ದತ್ತಾಂಶಕ್ಕಾಗಿ 1 ತಿಂಗಳ ಮಗುವಿನಿಂದ 65 ವರ್ಷದ ವೃದ್ಧರು ಸೇರಿದಂತೆ ಒಟ್ಟು 145 ಸೋಂಕಿತರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಸೋಂಕಿತರನ್ನು ಅವರ ವಯಸ್ಸಿನ ಆಧಾರದ ಮೇಲೆ 3 ಗುಂಪುಗಳಾಗಿ ವಿಂಗಡಿಸಿ, 5-17 ವರ್ಷ ವಯಸ್ಸಿನ ಮಕ್ಕಳು ಒಂದು ಗುಂಪು, 18 ರಿಂದ 65 ವರ್ಷ ವಯಸ್ಸಿನ ಸೋಂಕಿತರನ್ನು ಮತ್ತೊಂದು ಗುಂಪಾಗಿ ಪ್ರತ್ಯೇಕಿಸಿ ದತ್ತಾಂಶ ಸಂಗ್ರಹಿಸಲಾಗಿತ್ತು.
ಈ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಸೋಂಕು ಪೀಡಿತ ಹಿರಿಯರಿಗಿಂತ ಮಕ್ಕಳಲ್ಲಿ ವೈರಸ್ ಪ್ರಮಾಣ 100 ಪಟ್ಟು ಅಧಿಕವಾಗಿರುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಕ್ಕಳಲ್ಲಿ ಉಸಿರಾಟ ನಾಳಗಳಲ್ಲಿ ಕೊರೋನಾ ವೈರಸ್ ಪ್ರಮಾಣ ದೊಡ್ಡವರಿಗಿಂತ 100 ಪಟ್ಟು ಹೆಚ್ಚಿರುತ್ತದೆ. ಇದೇ ರೀತಿ ಸೋಂಕಿನ ಪ್ರಮಾಣ ಯುವಕರಲ್ಲೂ ಇರುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿಗೆ ಯುವಕರೂ ಕೂಡ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕೊರೋನಾ ಸೋಂಕು ಒಕ್ಕರಿಸಿದಾಗ ಉಸಿರಾಟದ ನಾಳಗಳಲ್ಲಿ ಸೇರುವ ವೈರಸ್, ತನ್ಮೂಲಕ ವೈರಲ್ ನ್ಯೂಕ್ಲಿಯಿಕ್ ಆಮ್ಲವನ್ನು ಉತ್ಪತ್ತಿ ಮಾಡಿಕೊಳ್ಳುತ್ತದೆ. ಈ ಆಮ್ಲ ಬೇರೆ ಹೊಸ ವೈರಸ್ ಗಳ ಉತ್ಪತ್ತಿಗೆ ನೆರವಾಗುತ್ತದೆ. ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ ಎಂದು ಅಭಿಪ್ರಾಯಪಡಲಾಗಿದೆ. ಮಕ್ಕಳ ನಡವಳಿಕೆಯನ್ನು ಗಮನಿಸಿ ಆರಂಭಿಕ ದಿನಗಳಲ್ಲಿಯೇ ವೈರಸ್ ಸೋಂಕಿನ ಕುರಿತು ಗ್ರಹಿಸಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


