ಉಕ್ರೇನ್ ವಿಮಾನ ದುರಂತ; ತನಿಖೆಗೆ ಸಹಾಯ ಮಾಡಲು ಐಎಸ್‌ಎಒ ಸಿದ್ಧ
ನಿನ್ನೆ ಅಪಘಾತಕ್ಕೀಡಾದ ಉಕ್ರೇನ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್ ಫ್ಲೈಟ್ 752ನ ತನಿಖೆಗೆ ಸಹಾಯ ಮಾಡಲು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಟೊರೊಂಟೊ: ನಿನ್ನೆ ಅಪಘಾತಕ್ಕೀಡಾದ ಉಕ್ರೇನ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್ ಫ್ಲೈಟ್ 752ನ ತನಿಖೆಗೆ ಸಹಾಯ ಮಾಡಲು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಟೆಹ್ರಾನ್‌ನ ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ ಬೋಯಿಂಗ್ 737-800 ವಿಮಾನ ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲ 176 ಜನರು ಸಾವನ್ನಪ್ಪಿದ್ದರು. ಅದು ಉಕ್ರೇನಿಯನ್ ರಾಜಧಾನಿ ಕೀವ್‌ಗೆ ಹಾರುತ್ತಿತ್ತು. ಸಾವಿಗೀಡಾದವರಲ್ಲಿ ಹೆಚ್ಚಿನವರು ಇರಾನ್ ಮತ್ತು ಕೆನಡಾದ ಪ್ರಜೆಗಳು ಎಂದು ತಿಳಿದುಬಂದಿದೆ.
"ಐಸಿಎಒ ತನ್ನ ಭಾಗಿದಾರ ದೇಶಗಳೊಂದಿಗೆ ಸಂಪರ್ಕದಲ್ಲಿದ್ದು, ಕರೆ ಮಾಡಿದರೆ ಅವರಿಗೆ ಸಹಾಯ ಮಾಡಲಿದೆ. ದುರಂತದ ಕಾರಣದ ಬಗ್ಗೆ ಊಹಾಪೋಹಗಳನ್ನು ತಪ್ಪಿಸುವ ಮಹತ್ವದ ಜವಾಬ್ದಾರಿ ಅದರ ನಾಯಕತ್ವದ ಮೇಲಿದೆ ಎಂದು ಬುಧವಾರ ಹೇಳಿಕೆ ತಿಳಿಸಿದೆ.
ಇದೇ ವಿಚಾರವಾಗಿ ಮಾತನಾಡಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು, ವಿಮಾನ ದುರಂತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈಗಲೇ ಅದರ ಕುರಿತು ಹೇಳಿಕೆ ನೀಡುವುದು ತಪ್ಪು. ತನಿಖೆ ಬಳಿಕ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದಾರೆ.
Related Article
176 ಮಂದಿ ದುರ್ಮರಣ: ಅಪಘಾತಕ್ಕೀಡಾದ ವಿಮಾನದ ಕಪ್ಪು ಪೆಟ್ಟಿಗೆಯನ್ನು ಅಮೆರಿಕನ್ನರಿಗೆ ನೀಡುವುದಿಲ್ಲ - ಇರಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


