ಮಲೇಷಿಯಾ ಪ್ರಧಾನಿ ಮಹತಿರ್ ಮೊಹಮದ್ ರಾಜೀನಾಮೆ
ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.

ಕೌಲಾಲಂಪುರ: ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.
‘ಮಹತಿರ್ ಮೊಹಮದ್ ಅವರು ಇಂದು ಮಲೇಷ್ಯಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ರಾಜೀನಾಮೆ ಪತ್ರವನ್ನು ಮಧ್ಯಾಹ್ನ ಮಲೇಷಿಯಾದ ರಾಜರಿಗೆ ಸಲ್ಲಿಸಲಾಗಿದೆ’ ಎಂದು ಪ್ರಧಾನಮಂತ್ರಿ ಅವರ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರತಿಪಕ್ಷಗಳು ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಭಾನುವಾರ ಸಭೆಗಳನ್ನು ನಡೆಸುವ ಮೂಲಕ ರಾಜಕೀಯ ಮರುಮೈತ್ರಿಯನ್ನು ಯೋಜಿಸುತ್ತಿವೆ ಎಂಬ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಪಕಾಟನ್ ಹರಪನ್ ಎಂದು ಕರೆಯಲ್ಪಡುವ ‘ಅಲೈಯನ್ಸ್ ಆಫ್ ಹೋಪ್’ ಒಕ್ಕೂಟ ಮೇ 2018 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿದ ನಂತರ ಮಹತಿರ್ ಮಲೇಷ್ಯಾ ಪ್ರಧಾನಿಯಾಗಿ ಅಧಿಕಾರಕ್ಕೇರಿದ್ದರು. ಮಹತಿರ್ ಅವರು ಪಕಾಟನ್ ಹರಪನ್ ಒಕ್ಕೂಟದ ನಾಲ್ಕು ಮೈತ್ರಿ ಪಕ್ಷಗಳಲ್ಲಿ ಒಂದಾದ ಪ್ರಿಬುಮಿ ಬರ್ಸಾಟು ಮಲೇಷ್ಯಾ (ಪಿಪಿಬಿಎಂ)ನ ಅಧ್ಯಕ್ಷರೂ ಆಗಿದ್ದಾರೆ.
ಮಹತಿರ್ ಅವರ ರಾಜೀನಾಮೆ ಹೇಳಿಕೆಗೂ ಮುನ್ನ ಪಿಪಿಬಿಎಂ ಅಧ್ಯಕ್ಷ ಮುಹಿದ್ದೀನ್ ಯಾಸಿನ್ ಹೇಳಿಕೆ ನೀಡಿ, ಫೆ. 23 ರಂದು ನಡೆದ ಸಭೆಯ ನಂತರ ಪಕಟಾನ್ ಹರಪನ್ ಒಕ್ಕೂಟವನ್ನು ತ್ಯಜಿಸಲು ಪಕ್ಷದ ಸರ್ವೋಚ್ಛ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
‘ದೇಶದ ಸದ್ಯದ ಮತ್ತು ಭವಿಷ್ಯದ ರಾಜಕೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.’ ಎಂದು ಮುಹಿದ್ದೀನ್ ಯಾಸಿನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


