ಅಮೆರಿಕಾ ರಿಯಾಲಿಟಿ ಶೋನಲ್ಲಿ ಪ್ರಶಸ್ತಿ ಗೆದ್ದ ಮುಂಬೈ ನೃತ್ಯ ತಂಡ
ಮುಂಬೈ ಮೂಲದ ವಿ ಅನ್ ಬೀಟಬಲ್ ನೃತ್ಯ ತಂಡ ಜನಪ್ರಿಯ ರಿಯಾಲಿಟಿ ಶೋ ಅಮೆರಿಕಾ ಹ್ಯಾಸ್ ಗಾಟ್ ಟ್ಯಾಲೆಂಟ್ ಸೀಸನ್-2ರಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದೆ.

ವಾಷಿಂಗ್ಟನ್: ಮುಂಬೈ ಮೂಲದ ವಿ ಅನ್ ಬೀಟಬಲ್ ನೃತ್ಯ ತಂಡ ಜನಪ್ರಿಯ ರಿಯಾಲಿಟಿ ಶೋ ಅಮೆರಿಕಾ ಹ್ಯಾಸ್ ಗಾಟ್ ಟ್ಯಾಲೆಂಟ್ ಸೀಸನ್-2ರಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಿದೆ.
ಕಾರ್ಯಕ್ರಮದ ತೀರ್ಪುಗಾರರಾದ ಸೈಮನ್ ಕೋವೆಲ್, ಹೈಡಿ ಕ್ಲುಮ್, ಆಲೇ ಶಾ ಡಿಕ್ಸನ್ ಮತ್ತು ಹೋವಿ ಮ್ಯಾಂಡೆಲ್ ಪ್ರಶಸ್ತಿ ಪ್ರಕಟಿಸಿದ್ದು, ವಿ ಅನ್ ಬೀಟಬಲ್ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಿದ್ದಾರೆ.
ಮುಂಬೈನ 29 ಸದಸ್ಯರು ಒಳಗೊಂಡ ನೃತ್ಯ ತಂಡ ಇದಾಗಿದ್ದು, ಅವರಲ್ಲಿ ಬಹುತೇಕರು ನಗರದ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವವರಾಗಿದ್ದಾರೆ. ಕಳೆದ ವರ್ಷದ ಸೀಸನ್-1ರಲ್ಲಿ ವಿ ಅನ್ ಬೀಟಬಲ್ ತಂಡ 4ನೇ ಸ್ಥಾನ ಪಡೆದುಕೊಂಡಿತ್ತು. ಸಾಹಸಮಯ ನೃತ್ಯ ಪ್ರದರ್ಶನಗಲ ಮೂಲಕ ಈ ತಂಡದ ಸದಸ್ಯರು ಮನೆ ಮಾತಾಗಿದ್ದರು. ಈ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಶ್ತಿ ತನ್ನದಾಗಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


