ತೀವ್ರಗೊಂಡ ಕೊರೋನಾ ವೈರಸ್ ಭೀತಿ: ಸಾವಿನ ಸಂಖ್ಯೆ 636ಕ್ಕೆ ಏರಿಕೆ, 31,000 ಜನರಲ್ಲಿ ಸೋಂಕು ಪತ್ತೆ
ಚೀನಾದಲ್ಲಿ ಕೊರೋನಾ ವೈರಸ್ ಭೀತಿ ಮತ್ತಷ್ಟು ತೀವ್ರಗೊಂಡಿದ್ದು, ಸಾವಿನ ಸಂಖ್ಯೆ 636ಕ್ಕೆ ಏರಿಗೆಯಾಗಿದೆ. ಅಲ್ಲದೆ, ಸೋಂಕು ತಗುಲಿದವರ ಸಂಖ್ಯೆ 31,000 ತಲುಪಿದೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀಜಿಂಗ್: ಚೀನಾದಲ್ಲಿ ಕೊರೋನಾ ವೈರಸ್ ಭೀತಿ ಮತ್ತಷ್ಟು ತೀವ್ರಗೊಂಡಿದ್ದು, ಸಾವಿನ ಸಂಖ್ಯೆ 636ಕ್ಕೆ ಏರಿಗೆಯಾಗಿದೆ. ಅಲ್ಲದೆ, ಸೋಂಕು ತಗುಲಿದವರ ಸಂಖ್ಯೆ 31,000 ತಲುಪಿದೆ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವುಹಾನ್'ನ ಹುಬೆ ಪ್ರಾಂತ್ರಯಲ್ಲಿ 69 ಸಾವುಗಳಾಗಿರುವುದಾಗಿ ವರದಿಗಳಾಗಿದ್ದು, ಇದರಂತೆ ಹೆನಾನ್, ಗ್ವಾಂಗ್ಡೊಂಗ್, ಹೈನಾನ್ ಪ್ರದೇಶಗಳಲ್ಲಿಯೂ ಕೊರೋನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರೆಸಿದೆ ಎಂದು ತಿಳಿಸಿದೆ.
ಗುರುವಾರ ಒಂದೇ ದಿನದಲ್ಲಿ ಒಟ್ಟು 73 ಮಂದಿ ಸಾವನ್ನಪ್ಪಿದ್ದು, 3,143 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಂತೆ ಸೋಂಕು ತಗುಲಿದವರ ಸಂಖ್ಯೆ 31,161ಕ್ಕೆ ಏರಿಕೆಯಾಗಿದೆ. ಈ ನಡುವೆ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 1,540 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಚೀನಾದಲ್ಲಿದ್ದ 19 ಮಂದಿ ವಿದೇಶೀ ಪ್ರಜೆಗಳಿಗೂ ಸೋಂಕು ತಗುಲಿದ್ದು, ಯಾವ ರಾಷ್ಟ್ರದ ಪ್ರಜೆಗಳು ಎಂಬುದರ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


