ಕೊರೋನಾಗೆ ಮಾಡರ್ನಾ ಲಸಿಕೆ ಪಡೆದ ವೈದ್ಯರಿಗೆ ಎದುರಾಯ್ತು ಅಲರ್ಜಿ ಸಮಸ್ಯೆ!
ಜಗತ್ತು ಕೊರೋನಾ ವೈರಸ್ ಗೆ ಲಸಿಕೆಯನ್ನು ಎದುರುನೋಡುತ್ತಿದ್ದು, ಅಮೆರಿಕಾದಲ್ಲಿ ಮಾಡರ್ನಾ ಲಸಿಕೆಯನ್ನು ಪಡೆದ ಬೋಸ್ಟನ್ ನ ವೈದ್ಯರೊಬ್ಬರಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ.

ವಾಷಿಂಗ್ ಟನ್: ಜಗತ್ತು ಕೊರೋನಾ ವೈರಸ್ ಗೆ ಲಸಿಕೆಯನ್ನು ಎದುರುನೋಡುತ್ತಿದ್ದು, ಅಮೆರಿಕಾದಲ್ಲಿ ಮಾಡರ್ನಾ ಲಸಿಕೆಯನ್ನು ಪಡೆದ ಬೋಸ್ಟನ್ ನ ವೈದ್ಯರೊಬ್ಬರಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ.
ಬೋಸ್ಟಾನ್ ವೈದ್ಯಕೀಯ ಕೆಂದ್ರದ ಜೆರಿಯಾಟ್ರಿಕ್ ಆಂಕೊಲಾಜಿ ಸಹೋದ್ಯೋಗಿ ಡಾ. ಹೊಸೆನ್ ಸದರ್ಜಾದೆ ವೈದ್ಯರು ಕೊರೋನಾಗೆ ಲಸಿಕೆಯನ್ನು ಪಡೆದಿದ್ದರು. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಅವರಿಗೆ ಲಸಿಕೆ ನೀಡುತ್ತಿದ್ದಂತೆಯೇ ಹೃದಯ ಬಡಿತ ಹೆಚ್ಚಾಗಿ ತಲೆತಿರುಗುವಿಕೆ ಉಂಟಾಯಿತು. ತಕ್ಷಣವೇ ತೀವ್ರತರವಾದ ಪರಿಣಾಮ ಎದುರಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ.
ಮಾಡರ್ನಾ ಲಸಿಕೆ ರಾಷ್ಟ್ರವ್ಯಾಪಿ ಬಳಕೆಯ ಮೊದಲನೇ ವಾರದಲ್ಲಿದ್ದು, ಇದೇ ಮೊದಲ ಬಾರಿಗೆ ಅದರ ತೀವ್ರತರ ಅಡ್ಡ ಪರಿಣಾಮದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಲಭ್ಯವಾಗಿದೆ.
ಬೋಸ್ಟಾನ್ ನ ವೈದ್ಯಕೀಯ ಕೇಂದ್ರದ ವಕ್ತಾರ ಡೇವಿಡ್ ಕಿಬ್ಬ್ ಈ ಬಗ್ಗೆ ಮಾಹಿತಿ ನೀಡಿದ್ದು, ಡಾ. ಹೊಸೆನ್ ಸದರ್ಜಾದೆಗೆ ಅಲರ್ಜಿ ತೀವ್ರವಾದಾಗ, ಅವರನ್ನು ತುರ್ತು ವಿಭಾಗಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಈಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪಿಫೈಜರ್ ಲಸಿಕೆಯನ್ನು ಪಡೆದು ಅದರ ಮೂಲಕ ಅಡ್ಡಪರಿಣಾಮಗಳನ್ನು ಎದುರಿಸುತ್ತಿರುವವರ ಪ್ರಕರಣಗಳ ಮೇಲೆ ಎಫ್ ಡಿಎ ನಿಗಾ ವಹಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


