ನೇಪಾಳ: ಜ.1 ರಿಂದ ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯಲು ಕೆಪಿ ಒಲಿ ಸರ್ಕಾರ ಶಿಫಾರಸು
ನೇಪಾಳದಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ರಣತಂತ್ರ ಹೆಣೆಯುತ್ತಿದ್ದು, ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವುದಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.

ಕಠ್ಮಂಡು: ನೇಪಾಳದಲ್ಲಿ ರಾಜಕೀಯ ಅಸ್ಥಿರತೆಯ ನಡುವೆಯೇ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ರಣತಂತ್ರ ಹೆಣೆಯುತ್ತಿದ್ದು, ಮೇಲ್ಮನೆಯ ಚಳಿಗಾಲದ ಅಧಿವೇಶನ ಕರೆಯುವುದಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದಾರೆ.
ಪ್ರತಿನಿಧಿಗಳ ಸಭೆಯನ್ನು ವಿಸರ್ಜನೆ ಮಾಡಿದ ಒಂದು ವಾರದ ನಂತರ ಈ ಶಿಫಾರಸು ಕಳಿಸಿದ್ದು, ಜ.1 ರಂದು ಸಭೆ ಕರೆಯುವುದಕ್ಕೆ ಕೇಳಿದೆ.
ಪ್ರಧಾನಿಗಳ ಶಿಫಾರಸಿನ ಆಧಾರದಲ್ಲಿ ವಿದ್ಯಾದೇವಿ ಭಂಡಾರಿ ಕಳೆದ ವಾರ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ್ನು ವಿಸರ್ಜನೆ ಮಾಡಿದ್ದು, ಮಧ್ಯಂತರ ಚುನಾವಣೆಯನ್ನು ಘೋಷಿಸಿದ್ದರು. ಇದಕ್ಕೆ ಆಡಳಿತಾರೂಢ ಪಕ್ಷ ಹಾಗೂ ವಿಪಕ್ಷಗಳಿಂದ ಪ್ರತಿಭಟನೆಯೂ ವ್ಯಕ್ತವಾಗಿತ್ತು.
ನೇಪಾಳದಲ್ಲಿ ಕಮ್ಯುನಿಸ್ಟ್ ಪಕ್ಷ ಈಗ ಅಕ್ಷರಸಹ ಇಬ್ಭಾಗವಾಗಿದ್ದು, ಪ್ರಚಂಡ ಅವರ ಬಣ ಹಾಗೂ ಕೆಪಿ ಶರ್ಮಾ ಒಲಿ ಬಣದ ನಡುವೆ ತಿಕ್ಕಾಟ ಉಂಟಾಗಿದೆ. ಈಗ ಪ್ರತಿನಿಧಿಗಳ ಸಭೆಯನ್ನು ವಿಸರ್ಜನೆ ಮಾಡಿದ ಬಳಿಕ ನಡೆದ ಸಚಿವ ಸಂಪುಟ ಸಭೆಯಲ್ಲಿ ನ್ಯಾಷನಲ್ ಅಸೆಂಬ್ಲಿಯ ಚಳಿಗಾಲದ ಅಧಿವೇಶನವನ್ನು ಜ.1 ರಿಂದ ಕರೆಯುವಂತೆ ಶಿಫಾರಸು ಕಳಿಸಲಾಗಿದೆ.
ಪ್ರತಿನಿಧಿಗಳ ಸಭೆಯನ್ನು ವಿಸರ್ಜನೆ ಮಾಡಿದ ಬಳಿಕ ಪ್ರಚಂಡ ನೇತೃತ್ವದ ಬಣದ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈಗ ಎರಡೂ ಬಣದ ನಾಯಕರು ಪಕ್ಷದ ಮೇಲೆ ಹಕ್ಕು ಸ್ಥಾಪನೆಗಾಗಿ ಯತ್ನಿಸುತ್ತಿದ್ದು, ಚುನಾವಣಾ ಚಿಹ್ನೆಯನ್ನು ಪಡೆಯುವುದಕ್ಕೂ ಯತ್ನಿಸುತ್ತಿದ್ದಾರೆ, ಎನ್ ಸಿ ಪಿಯ ಯಾವ ಬಣ ಪಕ್ಷದ ಚಿಹ್ನೆ ಹಾಗೂ ಹೆಸರನ್ನು ಚುನಾವಣೆಗೆ ಬಳಸಿಕೊಳ್ಳುವುದಕ್ಕೆ ಕಾನೂನು ಬದ್ಧವಾಗಿ ಅಧಿಕಾರ ಹೊಂದಿದೆ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


