ನೇಪಾಳ ಪ್ರಧಾನಿ ಒಲಿಗೆ ಭಾರೀ ಹಿನ್ನೆಡೆ: ಸಂಸದೀಯ ನಾಯಕ ಸ್ಥಾನಕ್ಕೆ ಪುಷ್ಪ ಕಮಲ್ ದಹಲ್ ಆಯ್ಕೆ
ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ದಹಲ್-ನೇಪಾಳ ಬಣವು ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರನ್ನು ತಮ್ಮ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಕಠ್ಮಂಡು: ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ದಹಲ್-ನೇಪಾಳ ಬಣವು ಪುಷ್ಪ ಕಮಲ್ ದಹಲ್ 'ಪ್ರಚಂಡ' ಅವರನ್ನು ತಮ್ಮ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿದೆ.
ನ್ಯೂ ಬನೇಶ್ವರ ಸಂಸತ್ ಕಟ್ಟಡದಲ್ಲಿ ಬುಧವಾರ ನಡೆದ ಪಕ್ಷದ ದಹಲ್-ನೇಪಾಳ ಬಣದ ಮುಖಂಡರ ಸಭೆ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿದ್ದು, ಕೆ ಪಿ ಓಲಿಯನ್ನು ಪಕ್ಷದ ಸಂಸದೀಯ ನಾಯಕ ಸ್ಥಾನದಿಂದ ಉಚ್ಚಾಟಿಸಿದೆ, ಆ ಸ್ಥಾನಕ್ಕೆ ಪುಷ್ಪ ಕಮಲ್ ದಹಲ್‌ಲ್ ಅವರನ್ನು ನಾಮನಿರ್ದೇಶನ ಮಾಡಲು ಹಿರಿಯ ನಾಯಕ ಮಾಧವ್ ಕುಮಾರ್ ನೇಪಾಳ ಪ್ರಸ್ತಾಪವನ್ನಿಟ್ಟ ನಂತರ ಎಲ್ಲಾ ನಾಯಕರು ಸರ್ವಾನುಮತದಿಂದ ಅವರ ನಿರ್ಧಾರಕ್ಕೆ ಅನುಮೋದನೆ ನೀಡಿದ್ದಾರೆ.
ದಹಲ್-ನೇಪಾಳ ಬಣ ಈ ಹಿಂದೆ ಮಾಧವ್ ಕುಮಾರ್ ನೇಪಾಳ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ದಹಲ್ ಮತ್ತು ಮಾಧವ್ ಕುಮಾರ್ ಇಬ್ಬರೂ ಈಗ ಹೊಸದಾಗಿ ರೂಪುಗೊಂಡ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


