ವಿದೇಶ

ನೇಪಾಳದಲ್ಲಿ ಭಾರಿ ಭೂ ಕುಸಿತ: ಕನಿಷ್ಠ 18 ಸಾವು, 21 ಮಂದಿ ನಾಪತ್ತೆ

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇಪಾಳದಲ್ಲಿ ಭಾರಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿ 21 ಮಂದಿ ನಾಪತ್ತೆಯಾಗಿದೆ.

ನೇಪಾಳದಲ್ಲಿ ಭಾರಿ ಭೂ ಕುಸಿತ: ಕನಿಷ್ಠ 18 ಸಾವು, 21 ಮಂದಿ ನಾಪತ್ತೆ
ನೇಪಾಳ ಭೂ ಕುಸಿತ
Published On :

ಕಠ್ಮಂಡು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇಪಾಳದಲ್ಲಿ ಭಾರಿ ಭೂ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿ 21 ಮಂದಿ ನಾಪತ್ತೆಯಾಗಿದೆ.

ಮಧ್ಯ ನೇಪಾಳದ ಸಿಂಧೂಪಾಲ್ ಚೌಕ್ ಜಿಲ್ಲೆಯ ಜುಗಾಲ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿ, 21 ಮಂದಿ ನಾಪತ್ತೆಯಾಗಿದ್ದಾರೆ. ಈ ವರೆಗೂ 18ಮೃತ ದೇಹಗಳನ್ನು ಅವಶೇಷಗಳಡಿಯಿಂದ ಹೊರಕ್ಕೆ ತೆಗೆಯಲಾಗಿದೆ. ಇನ್ನೂ 21 ಮಂದಿ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವವರಿಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ.

 ಮೂಲಗಳ ಪ್ರಕಾರ ಲಿಡಿ ಗ್ರಾಮದ ಗುಡ್ಡ ಕುಸಿದಿದ್ದು, 170 ಮನೆಗಳ ಪೈಕಿ 37 ಮನೆಗಳು ಭೂಕುಸಿತದಲ್ಲಿ ನಾಶವಾಗಿವೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗುಡ್ಡದ ಅಡಿಯಲ್ಲಿದ್ದ 25 ಮನೆಗಳು ನಾಮಾವಶೇಷವಾಗಿದೆ ಎಂದು ಸ್ಥಳೀಯ ಎಸ್ ಪಿ ಪ್ರಜ್ವೋಲ್ ಮಹಾರ್ಜನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.