ಅಲ್ ಝಜೀರಾ ಪತ್ರಕರ್ತ ಮಹಮೊದ್ ಹುಸೇನ್ ಬಂಧನ ವಿಸ್ತರಣೆ
ಈಜಿಪ್ಟ್ ಅಧಿಕಾರಿಗಳು ಅಲ್ ಝಜೀರಾ ಸುದ್ದಿವಾಹಿನಿಯ ಪತ್ರಕರ್ತ ಮಹಮೂದ್ ಹುಸೇನ್ ಅವರ ಬಂಧನವನ್ನು ಸೋಮವಾರ ಇನ್ನೂ ೪೫ ದಿನಗಳ ಕಾಲ ವಿಸ್ತರಿಸಿದ್ದಾರೆ.

ಕೈರೋ: ಈಜಿಪ್ಟ್ ಅಧಿಕಾರಿಗಳು ಅಲ್ ಝಜೀರಾ ಸುದ್ದಿವಾಹಿನಿಯ ಪತ್ರಕರ್ತ ಮಹಮೂದ್ ಹುಸೇನ್ ಅವರ ಬಂಧನವನ್ನು
ಸೋಮವಾರ ಇನ್ನೂ ೪೫ ದಿನಗಳ ಕಾಲ ವಿಸ್ತರಿಸಿದ್ದಾರೆ.
ಈಜಿಪ್ಟ್ ನಾಗರೀಕರಾಗಿರುವ ಹುಸೇನ್ ಅವರನ್ನು ಡಿಸೆಂಬರ್ ೨೦೧೬ ರಿಂದ ಜೈಲಿನಲ್ಲಿರಿಸಲಾಗಿದೆ.ಅವರು ಖಾಸಗಿ ಭೇಟಿಗೆ ದೇಶಕ್ಕೆ ಆಗಮಿಸಿದ ನಂತರ ಅವರನ್ನು ಬಂಧಿಸಲಾಗಿತ್ತು. ಈಗ ಅವರು ೧೩೦೦ ದಿನಗಳಿಗಿಂತ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದಾರೆ.
ಹುಸೇನ್ ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರಚೋದನೆ ಹಾಗೂ ಗಲಭೆ ಹಬ್ಬಿಸುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಅವರು ಮತ್ತು ಅಲ್ ಝಜೀರಾ ಮಾಧ್ಯಮ ಸಂಸ್ಥೆ ನಿರಾಕರಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


