ಪಿಎಂ ಒಲಿ ಜತೆಗೆ ಭಿನ್ನಮತ: ಇನ್ನಷ್ಟು ಕೆಟ್ಟ ದಿನಗಳಿಗೆ ತಯಾರಾಗಿ-ಕಾರ್ಯಕರ್ತರಿಗೆ ಪ್ರಚಂಡ ಕರೆ
ನೇಪಾಳ ಕಮ್ಯುನಿಸ್ಟ್ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪಾ ಕಮಲ್ ದಹಲ್ ಪ್ರಚಂಡ ಮತ್ತು ಪ್ರಧಾನಿ ಕೆ ಪಿ ಶರ್ಮಾ ಒಲಿ ನಡುವೆ ನಡೆಯುತ್ತಿರುವ ಶೀತಲ ಸಮರ ತೀವ್ರಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ದಿನಗಳಿಗೆ ಸಾಕ್ಷಿಯಾಗುವಂತೆ ಪಕ್ಷದ ಕಾರ್ಯಕರ್ತರನ್ನುಅವರು ಕೇಳಿದ್ದಾರೆ.

ಕಟ್ಮಂಡು: ನೇಪಾಳ ಕಮ್ಯುನಿಸ್ಟ್ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪಾ ಕಮಲ್ ದಹಲ್ ಪ್ರಚಂಡ ಮತ್ತು ಪ್ರಧಾನಿ ಕೆ ಪಿ ಶರ್ಮಾ ಒಲಿ ನಡುವೆ ನಡೆಯುತ್ತಿರುವ ಶೀತಲ ಸಮರ ತೀವ್ರಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ದಿನಗಳಿಗೆ ಸಾಕ್ಷಿಯಾಗುವಂತೆ ಪಕ್ಷದ ಕಾರ್ಯಕರ್ತರನ್ನುಅವರು ಕೇಳಿದ್ದಾರೆ.
ಒಲಿ ಮತ್ತು ಪ್ರಚಂಡ ಇತ್ತೀಚಿನ ದಿನಗಳಲ್ಲಿ ಕನಿಷ್ಠ ಹತ್ತು ಸಭೆಗಳನ್ನು ನಡೆಸಿದ್ದಾರೆ. ಆದರೆ, ಒಬ್ಬ ವ್ಯಕ್ತಿ-ಒಂದು ಹುದ್ದೆಯ ನಿಯಮವನ್ನು ಪ್ರಧಾನಿ ಒಪ್ಪಿಕೊಳ್ಳದ ಕಾರಣ, ಮಾತುಕತೆ ವಿಫಲವಾಯಿತು. ನೇಪಾಳ ಕಮ್ಯುನಿಸ್ಟ್ ಪಕ್ಷದ (ಎನ್‌ಸಿಪಿ) ಸಹ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಲು ಪ್ರಧಾನಿ ಒಲಿ ನಿರಾಕರಿಸಿದ್ದಾರೆ.
ಪ್ರಚಂಡ ಸೇರಿದಂತೆ ಪಕ್ಷದ ಉನ್ನತ ನಾಯಕರು ಒಲಿ ಅವರ ರಾಜೀನಾಮೆಗೆ ಒತ್ತಾಯಿಸಿದ ನಂತರ ಕಳೆದ ಕೆಲವು ವಾರಗಳಿಂದ ಆಡಳಿತಾರೂಢ ಎನ್.ಸಿ.ಪಿ.ಯಲ್ಲಿ ಕಟುಆಂತರಿಕ ದ್ವೇಷ ಭುಗಿಲೆದ್ದಿದೆ, ದೆ, ಅವರ ಇತ್ತೀಚಿನ ಭಾರತ ವಿರೋಧಿ ಹೇಳಿಕೆಗಳು "ರಾಜಕೀಯವಾಗಿ ತಪ್ಪಾದ ಹೇಳಿಕೆ ಎಂದು ರಾಜತಾಂತ್ರಿಕವಾಗಿ ಸೂಕ್ತವಲ್ಲ" ಎಂದು ಪ್ರಚಂಡ ಹೇಳಿದ್ದಾರೆ. ಓಲಿಯ ವಿರೋಧಿಗಳು ಅವರ ನಿರಂಕುಶಾಧಿಕಾರಿ ಕಾರ್ಯಚಟುವಟಿಕೆಯ ವಿರುದ್ಧ ಹರಿಹಾಯ್ದಿದ್ದಾರೆ.
"ನಮ್ಮ ಮುಖ್ಯ ಕಾಳಜಿ ಅಧಿಕಾರವನ್ನು ಗಳಿಸುವುದರ ಬಗ್ಗೆ ಅಲ್ಲ, ಎನ್‌ಸಿಪಿಯನ್ನು ನಡೆಸುವಾಗ ಸರಿಯಾದ ಕಾರ್ಯವಿಧಾನವನ್ನು ಅನುಸರಿಸುವುದು ನಮಗೆ ಬೇಕು. . ನಾವು ಯಾವುದೇ ಸ್ಥಾನವನ್ನು ಗಳಿಸುವತ್ತ ಗಮನ ಹರಿಸುತ್ತಿಲ್ಲ, ಆದರೆ ನಮ್ಮ ಹೋರಾಟವು ಪಕ್ಷದಲ್ಲಿ ಬೆಳೆಯುತ್ತಿರುವ ತಪ್ಪು ಪ್ರವೃತ್ತಿಗೆ ವಿರುದ್ಧವಾಗಿದೆ" ಎಂದು ಪ್ರಚಂಡ ಹೇಳಿದ್ದಾರೆ. "ಒಬ್ಬ ಅಧ್ಯಕ್ಷರು (ಪಿಎಂ ಒಲಿ) ಪಕ್ಷದ ಸರಿಯಾದ ಕಾರ್ಯವಿಧಾನವನ್ನು ಅನುಸರಿಸದಿದ್ದರೆ ಪಕ್ಷದ ಏಕತೆ ಹೇಗೆ ಹಾಗೇ ಉಳಿಯುತ್ತದೆ?" ತಾನು ಮತ್ತು ಪಕ್ಷದ ಇತರ ಹಿರಿಯ ಮುಖಂಡರು ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಪಕ್ಷವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಚಂಡ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


