ವಿದೇಶ

ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿ ಹ್ಯಾಕ್: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತ್ರಿವರ್ಣ ಧ್ವಜ ಪ್ರಸಾರ!

ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿಯನ್ನು ಹ್ಯಾಕ್ ಮಾಡಲಾಗಿದ್ದು ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ.

ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿ ಹ್ಯಾಕ್: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತ್ರಿವರ್ಣ ಧ್ವಜ ಪ್ರಸಾರ!
ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿ ಹ್ಯಾಕ್: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತ್ರಿವರ್ಣ ಧ್ವಜ ಪ್ರಸಾರ!
Published On :

ನವದೆಹಲಿ: ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿಯನ್ನು ಹ್ಯಾಕ್ ಮಾಡಲಾಗಿದ್ದು ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ. 

ಸುದ್ದಿ ವಾಹಿನಿ ಜಾಹಿರಾತು ಪ್ರಸಾರ ಮಾಡುತ್ತಿದ್ದ ಮಧ್ಯದಲ್ಲಿ  ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದ ಜೊತೆ ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ.   

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಮಾಧ್ಯಮ ವರದಿಗಳ ಪ್ರಕಾರ ಮಧ್ಯಾಹ್ನ 3:30ಕ್ಕೆ ಪ್ರಸಾರವಾಗಿತ್ತು.

ಡಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, " ಜಾಹಿರಾತು ಪ್ರಕಟಿಸುತ್ತಿದ್ದಾಗ ಏಕಾ ಏಕಿ ಭಾರತದ ತ್ರಿವರ್ಣ ಧ್ವಜ ಕಾಣಿಸಿ ಕೆಲವು ಸಮಯದ ನಂತರ ಕಾಣೆಯಾಯಿತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.