ಆಗಸದಲ್ಲಿ ಏಲಿಯನ್?; UFO ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದ ಪೆಂಟಗನ್!
ಏಲಿಯನ್ ಅಸ್ಥಿತ್ವದ ಕುರಿತು ಸಂಶೋಧನೆಗಳು ಮುಂದುವರೆದಿರುವಂತೆಯೇ ಇತ್ತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ UFO (ಹಾರುವ ತಟ್ಟೆ ಅಥವಾ ಗುರುತು ಪತ್ತೆಯಾಗದ ವಸ್ತು) ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ.

ವಾಷಿಂಗ್ಟನ್: ಏಲಿಯನ್ ಅಸ್ಥಿತ್ವದ ಕುರಿತು ಸಂಶೋಧನೆಗಳು ಮುಂದುವರೆದಿರುವಂತೆಯೇ ಇತ್ತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ UFO (ಹಾರುವ ತಟ್ಟೆ ಅಥವಾ ಗುರುತು ಪತ್ತೆಯಾಗದ ವಸ್ತು) ಹಾರಾಟದ ಅಸಲಿ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಹೌದು.. ಸೋಮವಾರ ಪೆಂಟಗನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ ಏಲಿಯನ್ ಗಳ ನೌಕೆ ಎನ್ನಲಾದ UFO ಹಾರಾಟದ ದೃಶ್ಯಗಳಿವೆ ಎನ್ನಲಾಗಿದೆ. ಅಲ್ಲದೆ ಅಮೆರಿಕ ವಾಯುಸೇನೆ ಈ ವಿಡಿಯೋವನ್ನು ಸ್ವತಃ ತಾನೇ ಸೆರೆ ಹಿಡಿದಿರುವುದಾಗಿ ಘೋಷಣೆ ಮಾಡಿದೆ.
ಮೂಲಗಳ ಪ್ರಕಾರ ಗುರುತು ಪತ್ತೆಯಾಗದ ವಸ್ತು (UFO)ವೊಂದು ಆಕಾಶದಲ್ಲಿ ಅತಿ ವೇಗವಾಗಿ ಹಾರಾಡುತ್ತಿರುವ ಮೂರು ದೃಶ್ಯಗಳು 2007ರಿಂದ 2017ರ ಅವಧಿಯಲ್ಲಿ ವಾಯುಸೇನೆಯಿಂದ ಸೋರಿಕೆಯಾಗಿದ್ದು, ಜಗತ್ತಿನಾದ್ಯಂತ ವೈರಲ್ ಆಗಿತ್ತು. ಆದರೆ, ಈ ವಿಡಿಯೊ ಕುರಿತು ಅನುಮಾನಗಳು, ನಿರಾಕರಣೆಗಳೂ ಕೇಳಿ ಬಂದಿದ್ದವು. ಹೀಗಿರುವಾಗಲೇ ಅಮೆರಿಕ ವಾಯು ಸೇನೆ ಇದು ತಾನೇ ಸೆರೆ ಹಿಡಿದ ವಿಡಿಯೋ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ದೃಶ್ಯದಲ್ಲಿ ಸೆರೆಯಾಗಿರುವ ವಸ್ತು ಏನೆಂದು ಪತ್ತೆ ಮಾಡಲು ನಮಗೆ ಸಾಧ್ಯವಾಗಿಲ್ಲ ಎಂದು ಅದು ಹೇಳಿದೆ. ಆ ಮೂಲಕ ಏಲಿಯನ್ ಗಳ ಅಸ್ಥಿತ್ವದ ಕುರಿತು ಮತ್ತೆ ಚರ್ಚೆ ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


