ವಿದೇಶ

ವಿಪ್ರೊ ಕಂಪೆನಿಯಲ್ಲಿ ಉದ್ಯೋಗದಲ್ಲಿ ತಾರತಮ್ಯ: ಅಮೆರಿಕಾದ ಮಾಜಿ ಉದ್ಯೋಗಿಗಳಿಂದ ಮೊಕದ್ದಮೆ ದಾಖಲು

ಭಾರತದ ಐಟಿ ದಿಗ್ಗಜ ಕಂಪೆನಿ ವಿಪ್ರೊದಲ್ಲಿ ನೌಕರರ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಂಪೆನಿಯ ಐದು ಮಾಜಿ ಉದ್ಯೋಗಿಗಳು ಅಮೆರಿಕಾದಲ್ಲಿ ದಾವೆ ಹೂಡಿದ್ದಾರೆ.

ವಿಪ್ರೊ ಕಂಪೆನಿಯಲ್ಲಿ ಉದ್ಯೋಗದಲ್ಲಿ ತಾರತಮ್ಯ: ಅಮೆರಿಕಾದ ಮಾಜಿ ಉದ್ಯೋಗಿಗಳಿಂದ ಮೊಕದ್ದಮೆ ದಾಖಲು
ವಿಪ್ರೊ ಕಂಪೆನಿಯೊಂದರ ಗೇಟು
Published On :

ವಾಷಿಂಗ್ಟನ್: ಭಾರತದ ಐಟಿ ದಿಗ್ಗಜ ಕಂಪೆನಿ ವಿಪ್ರೊದಲ್ಲಿ ನೌಕರರ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಂಪೆನಿಯ ಐದು ಮಾಜಿ ಉದ್ಯೋಗಿಗಳು ಅಮೆರಿಕಾದಲ್ಲಿ ದಾವೆ ಹೂಡಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಪ್ರೊ ಸಂಸ್ಥೆಯಲ್ಲಿ ಜಗತ್ತಿನಾದ್ಯಂತ 1,60,000 ನೌಕರರಿದ್ದು ಅವರಲ್ಲಿ 14 ಸಾವಿರ ಮಂದಿ ನೌಕರರು ಅಮೆರಿಕಾದಲ್ಲಿದ್ದಾರೆ.

ಅಮೆರಿಕಾದ ನ್ಯೂಜೆರ್ಸಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ವಿಪ್ರೊ ಕಂಪೆನಿಯಲ್ಲಿ ಕೆಲಸಕ್ಕಿರುವ ಶೇಕಡಾ 80ರಷ್ಟು ಮಂದಿ ದಕ್ಷಿಣ ಏಷ್ಯಾದವರಾಗಿದ್ದು, ಭಾರತೀಯ ಮೂಲದವರು ಮತ್ತು ದಕ್ಷಿಣ ಏಷ್ಯಾದವರಿಗೆ ಪ್ರಾಧಾನ್ಯತೆ ನೀಡಿ ತಾರತಮ್ಯ ತೋರಿಸಲಾಗುತ್ತಿದೆ ಎಂದು ಮಾಜಿ ಉದ್ಯೋಗಿಗಳು ಆರೋಪಿಸಿದ್ದಾರೆ.

ವಿಪ್ರೊ ಕಂಪೆನಿಯಲ್ಲಿ ನೌಕರರ ನೇಮಕಾತಿ, ಬಡ್ತಿ, ಸೇವೆಯಿಂದ ತೆಗೆದುಹಾಕುವ ನಿರ್ಧಾರದಲ್ಲಿ ತೀವ್ರ ಮಟ್ಟಿನ ತಾರತಮ್ಯ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.