ವಿದೇಶ

ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಕೊರೋನಾ ವೈರಸ್ ಔಷಧ ಮಾನವ ಪ್ರಯೋಗ ವಿಫಲ

ವಿಶ್ವದ 130ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿದ್ದ ಅಮೆರಿಕ ಮೂಲದ ಔಷಧ ಕಂಪನಿಯ ಕೊರೋನಾ ವೈರಸ್ ಔಷಧದ ಮೊದಲ ಮಾನವ ಪ್ರಯೋಗ ವಿಫಲವಾಗಿದೆ ಎಂದು ತಿಳಿದುಬಂದಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಕೊರೋನಾ ವೈರಸ್ ಔಷಧ ಮಾನವ ಪ್ರಯೋಗ ವಿಫಲ
ಸಂಗ್ರಹ ಚಿತ್ರ
Published On :

ವಾಷಿಂಗ್ಟನ್: ವಿಶ್ವದ 130ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿದ್ದ ಅಮೆರಿಕ ಮೂಲದ ಔಷಧ ಕಂಪನಿಯ ಕೊರೋನಾ ವೈರಸ್ ಔಷಧದ ಮೊದಲ ಮಾನವ ಪ್ರಯೋಗ ವಿಫಲವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವಲ್ಲಿ ರೇಸ್ ನಲ್ಲಿ ಪ್ರಮುಖವಾಗಿದ್ದ ಅಮೆರಿಕ ಮೂಲದ ಗಿಲಿಯಡ್ ಸಂಸ್ಥೆಯ ಬಹು ನಿರೀಕ್ಷಿತ 'ರೆಮ್ಡೆಸಿವಿಯರ್' ಔಷಧದ ಮಾನವ ಪ್ರಯೋಗ ವಿಫಲವಾಗಿದೆ. ಕೋವಿಡ್-19 ರೋಗಿಗಳಲ್ಲಿ ಭರವಸೆ ಮೂಡಿಸಿದ್ದ ಅಮೆರಿಕಾದ ಔಷಧ ತಯಾರಿಕಾ ಕಂಪನಿ ಗಿಲಿಯಡ್ ಸೈನ್ಸಸ್ ಇಂಕ್'ನ ಪ್ರಾಯೋಗಿಕ ಔಷಧ 'ರೆಮ್ಡೆಸಿವಿಯರ್' ಮಾನವ ಪ್ರಯೋಗದಲ್ಲಿ ವಿಫಲಗೊಂಡಿದೆ. 

ಈ ಕುರಿತ ವರದಿಯು ವಿಶ್ವ ಆರೋಗ್ಯ ಸಂಸ್ಥೆಯ ವೆಬ್'ಸೈಟ್ ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಫೈನಾನ್ಶಿಯಲ್ ಟೈಮ್ ನಲ್ಲಿ ಈ ವರದಿ ಬಿತ್ತರಗೊಂಡಿದೆ. ವರದಿ ಬಿತ್ತರಗೊಳ್ಳುತ್ತಿದ್ದಂತೆಯೇ ಔಷಧ ತಯಾರಿಕಾ ಕಂಪನಿ ಗಿಲೀಯಡ್ ಸೈನ್ಸಸ್ ಪೋಸ್ಟ್ ಅನ್ನು ತೆಗೆದುಹಾಕಿದೆ. 

ಪ್ರಸ್ತುತ ಫೈನಾನ್ಶಿಯಲ್ ಟೈಮ್ ನಲ್ಲಿ ಬಿತ್ತರಗೊಂಡಿರುವ ವರದಿ ಪ್ರಕಾರ, ಒಟ್ಟು 237 ಮಂದಿಯನ್ನು ಸಂಶೋಧನೆಗೊಳಪಡಿಸಲಾಗಿದ್ದು, 158 ಮಂದಿಯನ್ನು ಡ್ರಗ್ ಮತ್ತು 79 ಮಂದಿಯನ್ನು ಕಂಟ್ರೋಲ್ ಗ್ರೂಪ್ ಎಂದು ವಿಭಜಿಸಲಾಗಿತ್ತು. ಇದರಲ್ಲಿ, ಔಷಧ ನೀಡುತ್ತಿದ್ದಂತೆಯೇ 18 ರೋಗಿಗಳಲ್ಲಿ ಅಡ್ಡಪರಿಣಾಮಗಳು ಕಂಡು ಬಂದಿದ್ದು, ಕೂಡಲೇ ಔಷಧಿ ನೀಡುವಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ವರದಿ ಪರಿಶೀಲನೆಯಲ್ಲಿದ್ದು, ಈ ನಡುವೆ ವರದಿಯನ್ನು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಡಬ್ಲ್ಯೂಹೆಚ್ಒ ಹೇಳಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.