ಕೊರೋನಾ ವೈರಸ್ ದೀರ್ಘಕಾಲ ನಮ್ಮೊಂದಿಗೆ ಇರುತ್ತದೆ; ಹುಷಾರಾಗಿರಿ, ಎಚ್ಚರಿಕೆಯಿಂದಿರಿ: ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್-19 ಸೋಂಕು ಈ ಭೂಮಿ ಮೇಲೆ ಕೆಲ ಕಾಲದವರಗೆ ಇರಬಹುದು, ಬಹುತೇಕ ರಾಷ್ಟ್ರಗಳು ಸೋಂಕನ್ನು ನಿಭಾಯಿಸುವ ಮತ್ತು ತಡೆಗಟ್ಟುವ ಮೊದಲ ಹೆಜ್ಜೆಯಲ್ಲಿ ಇನ್ನೂ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜೆನೆವಾ (ಸ್ವಿಡ್ಜರ್ಲ್ಯಾಂಡ್): ಕೋವಿಡ್-19 ಸೋಂಕು ಈ ಭೂಮಿ ಮೇಲೆ ಕೆಲ ಕಾಲದವರಗೆ ಇರಬಹುದು, ಬಹುತೇಕ ರಾಷ್ಟ್ರಗಳು ಸೋಂಕನ್ನು ನಿಭಾಯಿಸುವ ಮತ್ತು ತಡೆಗಟ್ಟುವ ಮೊದಲ ಹೆಜ್ಜೆಯಲ್ಲಿ ಇನ್ನೂ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದ್ಹನೊಮ್ ಗೆಬ್ರೆಯೆಸಸ್, ಕೊರೋನಾ ವೈರಸ್ ನಿಯಂತ್ರಣದಲ್ಲಿದೆ ಎಂದು ಕೆಲ ದೇಶಗಳು ಭಾವಿಸುತ್ತಿವೆ, ಆದರೆ ಅಲ್ಲಿ ಮತ್ತೆ ಸೋಂಕು ಕಂಡುಬರುತ್ತಿದೆ, ಆಫ್ರಿಕಾ ಮತ್ತು ಅಮೆರಿಕಾ ದೇಶಗಳಲ್ಲಿ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶಗಳು ಈ ಬಗ್ಗೆ ಜಾಗ್ರತೆ ವಹಿಸಿ ಸನ್ನದ್ಧವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ರಂದೇ ಇದನ್ನು ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಘೋಷಿಸಿತ್ತು. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ ಎಂದಿದ್ದಾರೆ.
ಪಶ್ಚಿಮ ಯುರೋಪ್ ರಾಷ್ಟ್ರಗಳಲ್ಲಿ ಸೋಂಕು ಸ್ಥಿರವಾಗಿದ್ದು ಇಳಿಮುಖವಾಗುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆಯಿದ್ದರೂ ಕೂಡ ಆಫ್ರಿಕಾ, ಮಧ್ಯ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಮತ್ತು ಪೂರ್ವ ಯುರೋಪ್ ಗಳಲ್ಲಿ ಇಳಿಮುಖವಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


