ವಿದೇಶ

ನವೆಂಬರ್ ನಲ್ಲಿ ಎರಡನೇ ಸುತ್ತಿನ ಕೊರೋನಾ, ಚೀನಾಗೆ ಮತ್ತಷ್ಟು ಸಂಕಷ್ಟ! 

ಕೊರೋನಾ ವೈರಸ್ ಗೆ ಈಗಾಗಲೇ ಜಗತ್ತೇ ತತ್ತರಿಸಿ ನಲುಗಿದ್ದು, ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಎರಡನೇ ಸುತ್ತಿನ ಕೊರೋನಾ ವೈರಸ್ ಎದುರಾಗುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ನವೆಂಬರ್ ನಲ್ಲಿ ಎರಡನೇ ಸುತ್ತಿನ ಕೊರೋನಾ, ಚೀನಾಗೆ ಮತ್ತಷ್ಟು ಸಂಕಷ್ಟ! 
ಚೀನಾ
Published On :

ಬೀಜಿಂಗ್: ಕೊರೋನಾ ವೈರಸ್ ಗೆ ಈಗಾಗಲೇ ಜಗತ್ತೇ ತತ್ತರಿಸಿ ನಲುಗಿದ್ದು, ಇದನ್ನು ಸುಧಾರಿಸಿಕೊಳ್ಳುವ ಮುನ್ನವೇ ಎರಡನೇ ಸುತ್ತಿನ ಕೊರೋನಾ ವೈರಸ್ ಎದುರಾಗುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. 

ಚೀನಾದಲ್ಲಿ ನವೆಂಬರ್ ನಲ್ಲಿ ಎರಡನೇ ಸುತ್ತಿನ ಕೊರೋನಾ ವೈರಸ್ ಸವಾಲು ಎದುರಾಗಲಿದೆ ಎನ್ನುತ್ತಿದ್ದಾರೆ ಚೀನಾದ ವೈದ್ಯಕೀಯ ತಜ್ಞರು.

ಶಾಂಘೈ ನಲ್ಲಿರುವ ಕೋವಿಡ್-19 ಕ್ಲಿನಿಕಲ್ ತಜ್ಞರ ತಂಡದಲ್ಲಿರುವ ಝಾಂಗ್ ವೆನ್ಹಾಂಗ್ ಮುಂದಿನ ದಿನಗಳಲ್ಲಿ ಎದುರಾಗಲಿರುವ ಕೊರೋನಾ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ವಿಧಾನಗಳ ಬಗ್ಗೆ ಮಾತನಾಡಿದ್ದಾರೆ.

ಚಳಿಗಾಲದ ವೇಳೆಗೆ ಎರಡನೇ ಸುತ್ತಿನ ಕೊರೋನಾ ಸೋಂಕು ಹರಡುವ ಸಾಧ್ಯತೆಗಳಿವೆ. ಕೊರೋನಾ ವೈರಸ್ ನೊಂದಿಗಿನ ಚೀನಾದ ಅನುಭವದಿಂದ ಮುಂದಿನ ದಿನಗಳಲ್ಲಿ ವೈರಾಣು ಸೋಂಕನ್ನು ನಿಭಾಯಿಸಬಹುದು ಎಂದು ಝಾಂಗ್ ವೆನ್ಹಾಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.