ಕೊರೋನಾ ವೈರಸ್ ನ 8 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!
ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ಪ್ರಭೇದಗಳನ್ನು ಗುರುತಿಸಿದ್ದಾರೆ.

ನ್ಯೂಯಾರ್ಕ್: ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ಪ್ರಭೇದಗಳನ್ನು ಗುರುತಿಸಿದ್ದಾರೆ.
ಓಪನ್ ಸೋರ್ಸ್ ಯೋಜನೆಯಾಗಿರುವ Nextstrain.org ಗೆ ವಿಶ್ವಾದ್ಯಂತ ಇರುವ ಪ್ರಯೋಗಾಲಯಗಳಿಂದ ಸಲ್ಲಿಕೆಯಾಗಿರುವ 2,000 ಕ್ಕೂ ಹೆಚ್ಚು ಜೆನೆಟಿಕ್ ಸೀಕ್ವೆನ್ಸ್ ಗಳ ಪ್ರಕಾರ ವೈರಾಣು ರೂಪಾಂತರ ಹೊಂದುತ್ತಿರುವುದು ತಿಳಿದುಬಂದಿದೆ.
ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನ ವರದಿಯ ಪ್ರಕಾರ, ಅಂಟಾರ್ಟಿಕ ಹೊರತುಪಡಿಸಿ ಎಲ್ಲಾ ಖಂಡಗಳಿಂದಲೂ ಸ್ಯಾಂಪಲ್ ಗಳನ್ನು ತರಿಸಿಕೊಳ್ಳಲಾಗಿದ್ದು, ರೂಪಾಂತರ ಹೊಂದುವುದಕ್ಕೆ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ರೂಪಾಂತರ ಹೊಂದುತ್ತದೆ ಎಂಬ ಮಾತ್ರಕ್ಕೆ ವೈರಾಣು ಅಪಾಯಕಾರಿಯಾಗುತ್ತಿದೆ ಎಂದಲ್ಲ, ಈ ರೂಪಾಂತರಗಳು ವಿಜ್ಞಾನಿಗಳಿಗೆ ಆ ವೈರಾಣುವಿನ ಮೂಲ ಹಾಗೂ ಚರ್ಯೆಯನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


